ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನ ‘ಸಿ’, ಕರಪ್ಷನ್‌ನ ‘ಸಿ’ ಎರಡಕ್ಕೂ ಹತ್ತಿರದ ಸಂಬಂಧ: ಮೋದಿ ಟೀಕೆ

Last Updated 5 ಮೇ 2018, 14:50 IST
ಅಕ್ಷರ ಗಾತ್ರ

ಶಿವಮೊಗ್ಗ: ಕಾಂಗ್ರೆಸ್‌(Congress) ಪದ ‘ಸಿ’(C) ಅಕ್ಷರದಿಂದ ಪ್ರಾರಂಭವಾಗುತ್ತದೆ. ಕರಪ್ಷನ್‌(ಭ್ರಷ್ಟಾಚಾರ) ಪದವೂ(Corruption) ‘ಸಿ’(C) ಅಕ್ಷರದಿಂದ ಪ್ರಾರಂಭವಾಗುತ್ತದೆ. ಈ ಎರಡರ ಮಧ್ಯೆ ಅಂತರ ಕಡಿಮೆ ಎಂದು ಪ್ರಧಾನಿ ನರೇಂದ್ರ ಮೋದಿ ಹೊಸದಾದ ‘ಸಿ’‘ಸಿ’ ಸೂತ್ರವೊಂದನ್ನು ಹರಿಬಿಟ್ಟರು.

ಶಿವಮೊಗ್ಗದ ಎನ್‌ಇಎಸ್‌ ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿಯ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು.

ಈ ಎರಡು ‘ಸಿ’‘ಸಿ’ಗಳ ನಡುವೆ ಅಂತರ ಬಹಳ ಕಡಿಮೆಯಾಗಿಬಿಟ್ಟಿದೆ. ಅಂತರವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿದೆ ಎಂದು ಮೋದಿ ಟೀಕಿಸಿದರು.

ನೋಟು ಅಮಾನ್ಯೀಕರಣದ ಬಳಿಕ ಕಂತೆ ಕಂತೆ ಹಣ ಹೊರಬಂತು. ಕೋಟಿ, ಕೋಟಿ ದುಡ್ಡು ತಿಜೋರಿಯಲ್ಲಿಟ್ಟವರು ನಿಮಗೆ ಒಳ್ಳೆದು ಮಾಡುತ್ತಾರೆ ಎಂಬ ನಂಬಿಕೆ ಇದೆಯೇ? 2008ರಲ್ಲಿ ₹75 ಕೋಟಿ ಇದ್ದ ಆಸ್ತಿ 2017ರಲ್ಲಿ ₹800 ಕೋಟಿ ಆಗಿದೆ ಎಂದು ಕಾಂಗ್ರೆಸ್‌ನವರೊಬ್ಬರು ಚುನಾವಣಾ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ. ಇದು ಯಾರ ದುಡ್ಡು? ಪ್ರಶ್ನಿಸಿ ಎಂದು ಮೋದಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ಮಾಡಿದರು.

ಮೋದಿಯವರು ಎಷ್ಟು ಕಷ್ಟಪಟ್ಟರೂ ಸಹ ವಿಧಾನಸಭೆಗೆ ಕಳ್ಳರನ್ನು ಹೋಗಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳ್ತಾರೆ. ಬೀರುವಿನೊಳಗೆ, ಮಂಚದ ಕೆಳಗೆ, ಬಾತ್‌ ರೂಮ್ ಗೋಡೆ ಒಳಗೆ ದುಡ್ಡು ಬಚ್ಚಿಟ್ಟವರಿಗೆ ನೀವೇ ಟಿಕೆಟ್ ನೀಡಿದ್ದು. ಅವರ ಬಗ್ಗೆ ಹೇಳಿ ಸ್ವಾಮೀ... ಎಂದು ಮೋದಿ ಪ್ರಶ್ನಿಸಿದರು.

ಕಾಂಗ್ರೆಸ್‌ನವರು ಲೆಕ್ಕ ಇಟ್ಟಿಲ್ಲ, ಕೊಟ್ಟಿಲ್ಲ. ಕೇವಲ ಸುಳ್ಳು ಹೇಳುವುದೇ ಅವರ ಕೆಲಸ. ಮರಳು ಮಾಫಿಯಾ ಯಾರದ್ದು? ಯಾರು ಇದನ್ನು ರಕ್ಷಿಸುವವರು ಎಂದು ಕಾಂಗ್ರೆಸ್‌ನವರನ್ನು ಪ್ರಶ್ನಿಸಿ. ನದಿ ನಿಮ್ಮದು, ಮರಳು ನಿಮ್ಮದು, ಇದರ ನಿಜವಾದ ಮಾಲೀಕರು ನೀವು. ಆದರೆ, ಒಂದು ಮುಷ್ಟಿ ಮರಳು ತೆಗೆಯಬೇಕಾದರೆ ಯಾರ ಅನುಮತಿ ಬೇಕು? ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT