ಪೇಟೆಯಲ್ಲಿ ಸೂಚ್ಯಂಕದ ಓಟಕ್ಕೆ ತಡೆ

7
ದೇಶಿ, ಜಾಗತಿಕ ವಿದ್ಯಮಾನಗಳ ಪ್ರಭಾವ l ವಿದೇಶಿ ಬಂಡವಾಳ ಹೊರಹರಿವು

ಪೇಟೆಯಲ್ಲಿ ಸೂಚ್ಯಂಕದ ಓಟಕ್ಕೆ ತಡೆ

Published:
Updated:
ಪೇಟೆಯಲ್ಲಿ ಸೂಚ್ಯಂಕದ ಓಟಕ್ಕೆ ತಡೆ

ಮುಂಬೈ: ಜಾಗತಿಕ, ದೇಶಿ ವಿದ್ಯಮಾನಗಳ ಪ್ರಭಾವಕ್ಕೆ ಒಳಗಾಗಿ ಷೇರುಪೇಟೆಯಲ್ಲಿ ಸೂಚ್ಯಂಕದ ಓಟಕ್ಕೆ ತಡೆ ಬಿದಿದ್ದೆ.

ಮಹಾರಾಷ್ಟ್ರ ದಿನದ ಅಂಗವಾಗಿ ಮಂಗಳವಾರ ವಹಿವಾಟು ನಡೆಯಲಿಲ್ಲ. ಹೀಗಾಗಿ ನಾಲ್ಕು ದಿನಗಳ ವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 54 ಅಂಶ ಇಳಿಕೆ ಕಂಡು 34,915 ಅಂಶಗಳಿಗೆ ಇಳಿಕೆ ಕಂಡಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ ಸಹ ವಾರದ ವಹಿವಾಟಿನಲ್ಲಿ 10,700 ಅಂಶಗಳಿಗೆ ಏರಿಕೆ ಕಂಡಿತ್ತು. ಅಂತಿಮವಾಗಿ 74 ಅಂಶ ಇಳಿಕೆಯಾಗಿ 10,618 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯವಾಯಿತು.

ಅಮೆರಿಕ ಮತ್ತು ಚೀನಾದ ನಡುವಿನ ವಾಣಿಜ್ಯ ಸಮರ ಮತ್ತೆ ಆರಂಭವಾಗುವ ಆತಂಕ ಎದುರಾಗಿದೆ. ಇದು ದೇಶಿ ಷೇರುಪೇಟೆಯ ವಹಿವಾಟಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು ಎಂದು ತಜ್ಞರು ಹೇಳಿದ್ದಾರೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬಾಹ್ಯ ವಾಣಿಜ್ಯ ಸಾಲದ ನಿಯಮಗಳನ್ನು ಸಡಿಲಗೊಳಿಸಿದೆ. ಈ ಸುದ್ದಿಯು ಷೇರುಪೇಟೆಯಲ್ಲಿ ಉತ್ತಮ ಆರಂಭಕ್ಕೆ ಕಾರಣವಾಯಿತು. 35 ಸಾವಿರದ ಗಡಿಯನ್ನೂ ದಾಟಿ ವಿಜೃಂಭಿಸಿತ್ತು.

ಆದರೆ ನಾಲ್ಕನೇ ತ್ರೈಮಾಸಿಕದಲ್ಲಿ ಕೆಲವು ಕಂಪನಿಗಳ ಆರ್ಥಿಕ ಸಾಧನೆ ಮಾರುಕಟ್ಟೆ ನಿರೀಕ್ಷೆಯಂತೆ ಪ್ರಕಟವಾಗಿಲ್ಲ. ಇದರಿಂದಾಗಿ ಸೂಚ್ಯಂಕ ಇಳಿಮುಖ ಹಾದಿ ಹಿಡಿಯಿತು.

ಸೇವಾ ವಲಯದ ಪ್ರಗತಿಯು ಏಪ್ರಿಲ್‌ನಲ್ಲಿ 3 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ಇದು ಸೂಚ್ಯಂಕದ ಇಳಿಕೆಯನ್ನು ತುಸು ತಡೆಹಿಡಿದಿತ್ತು. ಈ ಹಂತದಲ್ಲಿ ಜಾಗತಿಕ ಅಂಶದ ಮಾರಾಟದ ಒತ್ತಡ ಸೃಷ್ಟಿಯಾಗಿ ಸೂಚ್ಯಂಕ ಮತ್ತೆ ಇಳಿಮುಖವಾಯಿತು.

ಬ್ಯಾಂಕಿಂಗ್ ಷೇರುಗಳನ್ನು ಬಿಟ್ಟು ಉಳಿದೆಲ್ಲಾ ವಲಯಗಳಲ್ಲಿಯೂ ಮಾರಾಟದ ಒತ್ತಡ ಕಂಡುಬಂದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry