ಬೆಂಗಳೂರು: ಒಂದು ಕಡೆ ಒಲಿಂಪಿಕ್ ಕೂಟದಲ್ಲಿ ಈಜಿ ಬಂದ ಸಾಧಕರು. ಇನ್ನೊಂದೆಡೆ ತಾವೂ ಭವಿಷ್ಯದಲ್ಲಿ ‘ತಾರೆ’ಗಳಾಗುವ ಹುಮ್ಮಸ್ಸಿನಲ್ಲಿರುವ ಉದಯೋನ್ಮುಖರು. ಇವರಿಬ್ಬರ ಪೈಪೋಟಿಗೆ ಸಿದ್ಧವಾದ ‘ನೆಟ್ಟಕಲ್ಲಪ್ಪ ಈಜು ಕೇಂದ್ರ’ದಲ್ಲಿ ಉಲ್ಲಾಸಮಯ ವಾತಾವರಣ.

ಶನಿವಾರ ಹಾಗೂ ಭಾನುವಾರ ಇಲ್ಲಿ ನಡೆಯಲಿರುವ ನಾಲ್ಕನೇ ಆವೃತ್ತಿಯ ‘ನೆಟ್ಟಕಲ್ಲಪ್ಪ ಈಜು ಸ್ಪರ್ಧೆ’ಯಲ್ಲಿ 300ಕ್ಕೂ ಹೆಚ್ಚು ಸ್ಪರ್ಧಿಗಳು ಕಣಕ್ಕಿಳಿಯಲಿದ್ದಾರೆ. ಟೋಕಿಯೊ ಮತ್ತು ಪ್ಯಾರಿಸ್ ಒಲಿಂಪಿಕ್ ಕೂಟಗಳಲ್ಲಿ ಸ್ಪರ್ಧಿಸಿರುವ ಬೆಂಗಳೂರಿನ ಶ್ರೀಹರಿ ನಟರಾಜ್, ಒಲಿಂಪಿಕ್ ಕೂಟದಲ್ಲಿ ಭಾಗವಹಿಸಿದ ಕಿರಿಯ ವಯಸ್ಸಿನ ಈಜುಪಟು ದಿನಿಧಿ ದೇಸಿಂಗು ಅವರು ಈಜು ಕೂಟದ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಅವರೊಂದಿಗೆ ಅಂತರರಾಷ್ಟ್ರೀಯ ಕೂಟಗಳು ಮತ್ತು ರಾಷ್ಟ್ರೀಯ ಈಜು ಸ್ಪರ್ಧೆಗಳಲ್ಲಿ ಸಾಧನೆ ಮಾಡಿರುವ ಈಜುಪಟುಗಳು ಕೂಡ ಕಣಕ್ಕಿಳಿಯುತ್ತಿದ್ದಾರೆ. ಅವರಲ್ಲದೇ ಎಸ್. ದರ್ಶನ್, ಎಸ್. ದಕ್ಷಣ್, ರುಜುಲಾ, ಮಣಿಕಂಠ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಪ್ರಮುಖರು.

ಈ ಸಲವೂ ಸ್ಕಿನ್ಸ್ ವಿಭಾಗದ ಸ್ಪರ್ಧೆಗಳು ನಡೆಯಲಿವೆ. ರೋಚಕತೆಯ ರಸದೌತಣ ನೀಡುವ ಸ್ಕಿನ್ಸ್ ಸ್ಪರ್ಧೆಗಳು ಈಜುಪಟುಗಳ ಶಕ್ತಿ, ಸಾಮರ್ಥ್ಯಗಳನ್ನು ಕಠಿಣ ಪರೀಕ್ಷೆಗೊಡ್ಡುತ್ತವೆ. ಈ ಸಲ ಪ್ರಶಸ್ತಿ ಮೊತ್ತವೂ ಆಕರ್ಷಕವಾಗಿದೆ.

‘ಈ ಬಾರಿ ಒಟ್ಟು ಪ್ರಶಸ್ತಿ ಮೊತ್ತವನ್ನು ₹10.50 ಲಕ್ಷಕ್ಕೆ ಏರಿಸಲಾಗಿದೆ. ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡುವವರಿಗೆ ಅತ್ಯಮೂಲ್ಯ ಈಜುಪಟು ಪ್ರಶಸ್ತಿ ನೀಡಲಾಗುತ್ತದೆ. ತಲಾ ₹25 ಸಾವಿರ ನಗದು ಬಹುಮಾನ ಹೊಂದಿದೆ’ ಎಂದು ನೆಟ್ಟಕಲ್ಲಪ್ಪ ಈಜು ಕೇಂದ್ರ (ಎನ್ಎಸಿ) ಮುಖ್ಯಸ್ಥ ವರುಣ್ ನಿಜಾವನ್ ತಿಳಿಸಿದ್ದಾರೆ.

‘ಈ ಕೂಟದ ಪ್ರಮುಖ ಆಕರ್ಷಣೆಯೆಂದರೆ ಸ್ಕಿನ್ಸ್ ವಿಭಾಗದ ಸ್ಪರ್ಧೆಗಳು. ಅತ್ಯಂತ ರೋಚಕವಾದ ಸ್ಪರ್ಧೆ ಇದಾಗಿದೆ. ಯುರೋಪ್, ಅಮೆರಿಕದಲ್ಲಿ ಇದು ಬಹಳ ಪ್ರಚಲಿತದಲ್ಲಿದೆ. ಭಾರತದಲ್ಲಿ ಸತತ ನಾಲ್ಕನೇ ವರ್ಷ ಈ ವಿಭಾಗದ ಸ್ಪರ್ಧೆ ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ಇದು ನಾಕೌಟ್ ಮಾದರಿಯ ಸ್ಪರ್ಧೆಯಾಗಿದ್ದು, ಈಜುಪಟುಗಳ ಸಂಪೂರ್ಣ ಸಾಮರ್ಥ್ಯವನ್ನು ಒರೆಗೆ ಹಚ್ಚಲಿದೆ’ ಎಂದೂ ವರುಣ್ ವಿವರಿಸಿದರು.

ಪದ್ಮನಾಭನಗರದಲ್ಲಿರುವ ಕೆ.ಎ. ನೆಟ್ಟಕಲ್ಲಪ್ಪ ಈಜು ಕೇಂದ್ರ’ದಲ್ಲಿ ಸ್ಪರ್ಧೆಗಳು ನಡೆಯಲಿವೆ ಎರಡೂ ದಿನವೂ ಬೆಳಿಗ್ಗೆ 10 ರಿಂದ ರಾತ್ರಿ 7ರವರೆಗೆ ಸ್ಪರ್ಧೆಗಳು ನಡೆಯಲಿವೆ. ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಅಂತರರಾಷ್ಟ್ರೀಯ ಈಜು ಕೋಚ್ ಪ್ರದೀಪ್ಕುಮಾರ್ ಅವರು ಶನಿವಾರ ಸಂಜೆ 4.30ಕ್ಕೆ ಕೂಟಕ್ಕೆ
ಚಾಲನೆ ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.