ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದಕರಿನಾಯಕ, ಓಬವ್ವರನ್ನು ಮರೆತು, ಮತಗಳಿಗಾಗಿ ಕಾಂಗ್ರೆಸ್‌ ಸುಲ್ತಾನರ ಜಯಂತಿ ಮಾಡಲು ಹೊರಟಿದೆ: ಮೋದಿ

Last Updated 6 ಮೇ 2018, 6:34 IST
ಅಕ್ಷರ ಗಾತ್ರ

ಚಿತ್ರದುರ್ಗ: ಮದಕರಿನಾಯಕ, ಓಬವ್ವರನ್ನು ಮರೆತು, ಮತಗಳಿಗಾಗಿ ಕಾಂಗ್ರೆಸ್‌ ಸುಲ್ತಾನರ ಜಯಂತಿ ಮಾಡಲು ಹೊರಟಿದ್ದಾರೆ, ಆ ಮೂಲಕ ದುರ್ಗದ ಜನರ ಭಾವನೆಗಳಿಗೆ, ಇಲ್ಲಿನ ನಾಯಕರಿಗೆ ಅವಮಾನ ಮಾಡಿದ್ದಾರೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಇಲ್ಲಿನ ವಿಜ್ಞಾನ ಕಾಲೇಜು ಆವರಣದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ ವೀರ ಮದಕರಿ ನಾಯಕ, ಒನಕೆ ಒಬವ್ವ, ಮುರುಘ ಶರಣರನ್ನು ಸ್ಮರಿಸಿ, ಚಿತ್ರದುರ್ಗದ ಜನತೆಗೆ ನಮಸ್ಕರಿಸಿದರು.

ಒಂದು ಕುಟುಂಬದ ಹಿತಾಸಕ್ತಿಗಾಗಿ ಮಹಾಪುರುಷರನ್ನು ಮರೆಯುವ ಪ್ರವೃತ್ತಿ ಕಾಂಗ್ರೆಸ್‌ ಪಕ್ಷದ್ದು,  ಈ ನೆಲದ ಎಸ್‌.ನಿಜಲಿಂಗಪ್ಪ ಅವರನ್ನು ಕಾಂಗ್ರೆಸ್ ಅವಮಾನಿಸಿತ್ತು. ನಿಜಲಿಂಗಪ್ಪ ಅವರು ನೆಹರೂ ನೀತಿಗಳ ವಿರುದ್ಧ ಪ್ರಶ್ನೆ ಎತ್ತಿದ್ದಕ್ಕೆ, ಅವರನ್ನು ರಾಷ್ಟ್ರನಾಯಕರಾಗದಂತೆ ತಡೆಯಲಾಯಿತು. ಅಂಬೇಡ್ಕರ್‌ ಅವರನ್ನು ಅವಮಾನಿಸಿದಂತೆ, ದಲಿತ ಪರವಾದ ಕಾಳಜಿ ಹೊಂದಿದ್ದ ನಿಜಲಿಂಗಪ್ಪರನ್ನು ಅವಮಾನಿಸಿದರು ಎಂದು ಮೋದಿ ತಿಳಿಸಿದರು.

ನೂರಾರು ಯೋಜನೆಗಳಿಗೆ, ಸ್ಮಾರಕಗಳಿಗೆ, ರಸ್ತೆಗಳಿಗೆ ಒಂದೇ ಕುಟುಂಬದ ಸದಸ್ಯರ ಹೆಸರಿಟ್ಟರು ಆದರೆ ಅಂಬೇಡ್ಕರ್‌ ಅವರ ಹೆಸರಿಡಬೇಕು ಎಂದು ಕಾಂಗ್ರೆಸ್‌ಗೆ ಎಂದೂ ಅನ್ನಿಸಲಿಲ್ಲ. ಬಿಜೆಪಿ ಬಂದ ಬಳಿಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಂಬೇಡ್ಕರ್‌ ಜಯಂತಿ ಆಚರಿಸಿದೆವು. ದೇಶದ ಐದು ಪ್ರಮುಖ ನಗರಗಳಲ್ಲಿ ಅವರ ಸ್ಮಾರಕ ನಿರ್ಮಿಸಲು ಆರಂಭಿಸಿದ್ದೇವೆ ಎಂದರು

ಚಳ್ಳಕೆರೆ ಮುಂದಿನ ದಿನಗಳಲ್ಲಿ ವಿಜ್ಞಾನದ ಆಧುನಿಕ ಕೇಂದ್ರ ಆಗಲಿದೆ. ಇಸ್ರೊ, ಡಿಆರ್‌ಡಿಓ, ಬಾರ್ಕ್‌, ಐಐಎಸ್‌ಸಿ ಸಂಸ್ಥೆಗಳ ಅಂಗಸಂಸ್ಥೆಗಳು ಚಿತ್ರದುರ್ಗದ ಹೆಮ್ಮೆ ಹೆಚ್ಚಿಸಲಿವೆ.ಇಲ್ಲಿನ ಇಸ್ರೊದ ಕೇಂದ್ರದಲ್ಲಿ ಚಂದ್ರಯಾನ–2 ರ ಸಂಶೋಧನೆಗಳು ನಡೆಯುತ್ತಿವೆ ಎಂದು ಮೋದಿ ತಿಳಿಸಿದರು.

100 ವರ್ಷಗಳಲ್ಲಿ 70 ವರ್ಷ ಬರಗಾಲವಿದ್ದರೂ ಈ ಭಾಗದ ರೈತರು ಶ್ರಮವಹಿಸಿ ದುಡಿಯುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT