ಶನಿವಾರ, ಮಾರ್ಚ್ 6, 2021
19 °C

ಕೊಡಿಯಾಲ ಗ್ರಾಮದಲ್ಲಿ ಕೋಳಿವಾಡ ರೋಡ್ ಷೋ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಡಿಯಾಲ ಗ್ರಾಮದಲ್ಲಿ ಕೋಳಿವಾಡ ರೋಡ್ ಷೋ

ಕುಮಾರಪಟ್ಟಣ: ‘ರಾಜ್ಯದಲ್ಲಿ ಐದು ವರ್ಷ ಆಡಳಿತ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ, ಸಾಮಾನ್ಯ ಜನರಿಗೂ ತಲುಪುವಂತಹ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಕೋಳಿವಾಡ ಹೇಳಿದರು.

ಕೊಡಿಯಾಲ ಹೊಸಪೇಟೆ ಗ್ರಾಮದಲ್ಲಿ ಶುಕ್ರವಾರ ಪ್ರಮುಖ ಬೀದಿಗಳಲ್ಲಿ ರೋಡ್ ಷೋ ನಡೆಸಿ ಮತ ಯಾಚಿಸಿ ಮಾತನಾಡಿದ ಅವರು, ‘ಜನಪರ ಯೋಜನೆಗಳನ್ನು ಜಾರಿಗೊಳಿಸಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ’ ಎಂದರು.

‘ರಾಜ್ಯದಾದ್ಯಂತ ಕಾಂಗ್ರೆಸ್ ಪರ ಅಲೆ ಇದ್ದು, ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಗಿರೀಶಪ್ಪ ಹೆಗ್ಗಪ್ಪನವರ, ಸದಸ್ಯ ಭೀಮಪ್ಪ ಗೋಣೆಪ್ಪನವರ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶೇಖಪ್ಪ ಬೇಡರ್, ಎಪಿಎಂಸಿ ಮಾಜಿ ಅಧ್ಯಕ್ಷ ಸಣ್ಣತಮ್ಮಪ್ಪ ಬಾರ್ಕಿ, ಮುಖಂಡರಾದ ನಾಗರಾಜ ಹಳ್ಳೆಳ್ಳಪ್ಪನವರ, ಮಹೇಶಪ್ಪ ಚಕ್ರಸಾಲಿ, ಘನಿಸಾಬ್ ತೆಪ್ಪದ್, ಹಾಲೇಶ್ ಓಲೇಕಾರ್, ಕರಿಯಪ್ಪ ಮಾಳಿಗೇರ, ರಾಮಪ್ಪ ಮೆಡ್ಲೇರಿ, ರಾಜು ಹೆಗ್ಗಪ್ಪನವರ, ವೀರಕುಮಾರ್ ಪೂಜಾರ್, ಮಲ್ಲಜ್ಜ ಹೆಗ್ಗಪ್ಪನವರ, ಸಿದ್ದಪ್ಪ ಓಲೇಕಾರ್, ವಿಶ್ವನಾಥ ಹೆಗ್ಗಪ್ಪನವರ, ಪರಮೇಶಪ್ಪ ಕರಡೆಪ್ಪನವರ, ಗ್ರಾಮ ಪಂಚಾಯ್ತಿ ಸದಸ್ಯ ರಾಮಪ್ಪ ಗೋಣೆಪ್ಪನವರ, ಬಸವಣ್ಣೆಪ್ಪ ಹೆಗ್ಗಪ್ಪನವರ, ನೇತ್ರಾವತಿ ಓಲೇಕಾರ್, ಚಂದ್ರಕಲಾ ಹೆಗ್ಗಪ್ಪನವರ, ಲಕ್ಷ್ಮಮ್ಮ ದ್ಯಾಮಕ್ಕನವರ, ಇಸ್ಮಾಯಿಲ್, ಆನಂದಗೌಡ ಪಾಟೀಲ, ಪ್ರಕಾಶ್ ಬೇಗಾರ್, ಚಂದ್ರು ಪಾಟೀಲ, ಸಂಗಮೇಶ್ ಸೊಪ್ಪಿನ, ರಂಜಾನ್‌ಸಾಬ್ ನದಾಫ, ಪರಶುರಾಂ ತಳವಾರ, ನೀಲಕಂಠಪ್ಪ ಪೆದ್ದಪ್ಪನವರ ಇದ್ದರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.