ಚಿತ್ರದುರ್ಗ: ಪ್ರಚಾರಕ್ಕಾಗಿ ಚುನಾವಣಾ ಆಯೋಗ ನೀಡಿದ್ದ ಅವಧಿ ಮುಗಿದ ಹಿನ್ನೆಲೆಯಲ್ಲಿ ಸೋಮವಾರ ನಾಯಕನಹಟ್ಟಿಗೆ ಬಂದಿದ್ದ ನಟ ಕಿಚ್ಚ ಸುದೀಪ್ ಪ್ರಚಾರ ಮಾಡದೇ ವಾಪಸ್ ಹೋದರು.

ನಾಯಕನಹಟ್ಟಿಯಲ್ಲಿ ಮೊಳಕಾಲ್ಮುರು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ನಟ ಸುದೀಪ್ ಅವರು ಚುನಾವಣಾ ಪ್ರಚಾರ ನಡೆಸಲು ಆಯೋಗ ಬೆಳಿಗ್ಗೆ 9ರಿಂದ 12 ಗಂಟೆವರೆಗೂ ಸಮಯ ನಿಗದಿ ಮಾಡಿತ್ತು. ಆದರೆ, ಸುದೀಪ್ ಅವರು ಮಧ್ಯಾಹ್ನ 1 ಗಂಟೆಗೆ ಬಂದರು. ಚುನಾವಣಾ ಆಯೋಗದ ಅಧಿಕಾರಿಗಳು ‘ಪ್ರಚಾರ ಮಾಡುವಂತಿಲ್ಲ’ ಎಂದು ತಿಳಿಸಿದರು.

ಗುರುತಿಪ್ಪೇರುದ್ರಸ್ವಾಮಿ ದೇವಾಲಯದ ಒಳಮಠ ಮತ್ತು ಹೊರಮಠಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದ ಸುದೀಪ್ ವೇಗವಾಗಿ ಪಟ್ಟಣದಿಂದ ಹೊರಟು ಹೋದರು.

ಇದಕ್ಕೂ ಮುನ್ನ ಬಿಜೆಪಿಯವರು ಪ್ರಚಾರಕ್ಕೆ ಅನುಮತಿ ನೀಡಿದ ಅವಧಿ ಮುಗಿದ ಕೂಡಲೇ ಅವಧಿ ವಿಸ್ತರಣೆಗಾಗಿ ಮನವಿ ಮಾಡಿದರು. ಆದರೆ, ಅದೇ ಅವಧಿಯಲ್ಲಿ ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿಗಳ ಪ್ರಚಾರಕ್ಕೆ ಅನುಮತಿ ನೀಡಲಾಗಿತ್ತು. ಹೀಗಾಗಿ ಪಟ್ಟಣದಲ್ಲಿ ಕಾರ್ಯಕರ್ತರ ನಡುವೆ ಸಂಘರ್ಷ ಉಂಟಾಗಬಹುದು ಎಂಬ ಎಚ್ಚರಿಕೆಯಿಂದ ಅವಧಿಯನ್ನು ವಿಸ್ತರಿಸಲು ಅಧಿಕಾರಿಗಳು ಸಮ್ಮತಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.