ಶನಿವಾರ, ಮಾರ್ಚ್ 6, 2021
32 °C

ಉತ್ತರ ಭಾರತದ ರಾಜ್ಯಗಳಲ್ಲಿ ದೂಳು ಸಹಿತ ಬಿರುಗಾಳಿ, ಮಳೆಗೆ ಮೂವರು ಸಾವು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಉತ್ತರ ಭಾರತದ ರಾಜ್ಯಗಳಲ್ಲಿ ದೂಳು ಸಹಿತ ಬಿರುಗಾಳಿ, ಮಳೆಗೆ ಮೂವರು ಸಾವು

ನವದೆಹಲಿ/ ಮಥುರಾ: ಉತ್ತರ ಭಾರತದ ರಾಜ್ಯಗಳಲ್ಲಿ ಬುಧವಾರ ಸಂಜೆ ಮತ್ತೆ ದೂಳಿನಿಂದ ಕೂಡಿದ ಬಿರುಗಾಳಿ ಹಾಗೂ ಆಲಿಕಲ್ಲು ಸಹಿತ ಮಳೆ ಬಿದ್ದಿದ್ದು, ಉತ್ತರ ಪ್ರದೇಶದಲ್ಲಿ ಇಬ್ಬರು, ಅಸ್ಸಾಂನಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

ಮಧ್ಯಪ್ರದೇಶದ ಮಥುರಾ ಜಿಲ್ಲೆಯಲ್ಲಿ ಸಂಜೆ ಬಿರುಗಾಳಿ ಸಹಿತ ಮಳೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. 20 ನಿಮಿಷ ಬೀಸಿದ ಬಿರುಗಾಳಿಗೆ ಮರಗಳು, ವಿದ್ಯುತ್‌ ಕಂಬಗಳು ನೆಲಕ್ಕುರುಳಿದ್ದು, ಮನೆಗಳ ಮೇಲ್ಚಾವಣಿಗಳು ಕಿತ್ತುಹೋಗಿವೆ. 

ಆರಂಭದಲ್ಲಿ 20 ನಿಮಿಷ ಗಾಳಿ ಬೀಸಿದೆ. ಬಳಿಕ, ಇದು ತನ್ನ ವೇಗವನ್ನು ಹೆಚ್ಚಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅಸ್ಸಾಂನಲ್ಲಿ ಬಿರುಗಾಳಿ ಸಹಿತ ಮಳೆಗೆ ಒಬ್ಬರು ಮೃತಪಟ್ಟು, 11 ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಹರಿಯಾಣದಲ್ಲಿ ಆಲಿಕಲ್ಲು ಸಹಿತ ಮಳೆ ಬಿದ್ದ ವರದಿಯಾಗಿದೆ. ದೆಹಲಿಯಲ್ಲಿ ಮಧ್ಯಾಹ್ನ ವಾತಾವರಣದಲ್ಲಿ ಇದ್ದಕ್ಕಿಂದ್ದಂತೆ ಬದಲಾವಣೆಯಾಗಿದ್ದು, ಗಾಳಿ ಬೀಸಲಾರಂಭಿಸಿದೆ. ಮೇಘಾಲಯದಲ್ಲೂ ಬಿರುಗಾಳಿ ಬೀಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.