7

ವಿಶ್ವ ಟ್ವೆಂಟಿ–20ಯಲ್ಲಿ ಆಡುವ ಗುರಿ: ಮಲಿಕ್‌

Published:
Updated:
ವಿಶ್ವ ಟ್ವೆಂಟಿ–20ಯಲ್ಲಿ ಆಡುವ ಗುರಿ: ಮಲಿಕ್‌

ಮುಂಬೈ: ‘2020ರಲ್ಲಿ ನಡೆಯುವ ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಆಡುವ ಗುರಿ ಹೊಂದಿದ್ದೇನೆ’ ಎಂದು ಪಾಕಿಸ್ತಾನ ತಂಡದ ಆಲ್‌ರೌಂಡರ್‌ ಶೋಯಬ್‌ ಮಲಿಕ್‌ ತಿಳಿಸಿದ್ದಾರೆ.

‘2019ರಲ್ಲಿ ನಡೆಯುವ 50 ಓವರ್‌ಗಳ ಏಕದಿನ ವಿಶ್ವಕಪ್‌ ನನ್ನ ಪಾಲಿಗೆ ಕೊನೆಯ ವಿಶ್ವಕಪ್‌ ಆಗಲಿದೆ. ಇದರಲ್ಲಿ ಆಡಬೇಕೆಂಬ ಹೆಬ್ಬಯಕೆ ಹೊಂದಿದ್ದೇನೆ. ಜೊತೆಗೆ ವಿಶ್ವ ಟ್ವೆಂಟಿ–20 ಟೂರ್ನಿಯಲ್ಲೂ ಮಿಂಚುವ ಕನಸು ಹೊಂದಿದ್ದೇನೆ. ಹೀಗಾಗಿಯೇ ಫಿಟ್‌ನೆಸ್‌ ಕಾಪಾಡಿಕೊಳ್ಳುವತ್ತ ಹೆಚ್ಚು ಗಮನ ಹರಿಸಿದ್ದೇನೆ’ ಎಂದು ನುಡಿದಿದ್ದಾರೆ.

36ರ ಹರೆಯದ ಮಲಿಕ್‌, 2015ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅವರು 35 ಟೆಸ್ಟ್‌, 261 ಏಕದಿನ ಮತ್ತು 95 ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry