ವಾಷಿಂಗ್ಟನ್: ‘ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರನ್ನು ಜೂನ್ 12ರಂದು ಸಿಂಗಪುರದಲ್ಲಿ ನಡೆಯಲಿರುವ ಐತಿಹಾಸಿಕ ಸಭೆಯಲ್ಲಿ ಭೇಟಿಯಾಗಲಿದ್ದೇನೆ’ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಸಭೆಯಲ್ಲಿ ಉತ್ತರ ಕೊರಿಯಾವನ್ನು ನಿಶ್ಯಸ್ತ್ರೀಕರಣಗೊಳಿಸುವ ವಿಚಾರವೇ ಪ್ರಮುಖವಾಗಿ ಚರ್ಚೆಯಾಗುವ ಸಂಭವ ಇದೆ.

ಕಿಮ್ ಜೊತೆಗಿನ ಶೃಂಗಸಭೆಯ ಕುರಿತು ಚರ್ಚೆ ನಡೆಸಲು ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪೋಂಪಿಯೊ, ಉತ್ತರ ಕೊರಿಯಾಕ್ಕೆ ಭೇಟಿ ನೀಡಿದ ಬಳಿಕ ಈ ನಿರ್ಧಾರ ಹೊರಬಿದ್ದಿದೆ.

‘ಜೂನ್ 12ರಂದು ಇಬ್ಬರೂ ಭೇಟಿಯಾಗಲಿದ್ದೇವೆ. ವಿಶ್ವಶಾಂತಿ ನಿಟ್ಟಿನಲ್ಲಿ ವಿಶೇಷ ಗಳಿಗೆಯಲ್ಲಿ ಇಬ್ಬರೂ ಶ್ರಮಿಸಲಿದ್ದೇವೆ’ ಎಂದು ಟ್ರಂಪ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಮೂವರು ಅಮೆರಿಕ ನಾಗರಿಕರನ್ನು ಬರಮಾಡಿಕೊಂಡ ಟ್ರಂಪ್
ಉತ್ತರ ಕೊರಿಯಾ ಬಿಡುಗಡೆ ಮಾಡಿರುವ ಅಮೆರಿಕದ ಮೂವರು ನಾಗರಿಕರನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲಾನಿಯಾ ಟ್ರಂಪ್ ಗುರುವಾರ ಬರಮಾಡಿಕೊಂಡರು.

ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರೊಂದಿಗೆ ನಡೆಯಲಿರುವ ಶೃಂಗಸಭೆಗೂ ಮುನ್ನ ಟ್ರಂಪ್ ಅವರಿಗೆ ದೊರೆತಿರುವ ರಾಜತಾಂತ್ರಿಕ ಜಯ ಇದು ಎಂದು ಹೇಳಲಾಗುತ್ತಿದೆ.

ಕಿಮ್ ಡಾಂಗ್ ಚುಲ್, ಕಿಮ್ ಹಾಕ್ ಸಾಂಗ್ ಮತ್ತು ಕಿಮ್ ಸಾಂಗ್ ಡ್ಯುಕ್ ಬಿಡುಗಡೆಯಾಗಿರುವ ಅಮೆರಿಕದ ಪೌರರು. ರಾಷ್ಟ್ರ ವಿರೋಧಿ ಚಟುವಟಿಕೆ ಆರೋಪದಲ್ಲಿ ಈ ಮೂವರಿಗೆ ಜೈಲು ಶಿಕ್ಷೆ ವಿಧಿಸಿ, ಉತ್ತರ ಕೊರಿಯಾದ ಕಾರ್ಮಿಕರ ಶಿಬಿರದಲ್ಲಿ ಇರಿಸಲಾಗಿತ್ತು. ಬಿಡುಗಡೆ ಬಳಿಕ ಈ ಮೂವರು ಟ್ರಂಪ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.