ಬುಧವಾರ, ಮಾರ್ಚ್ 3, 2021
31 °C

'ನಮೋ ಆ್ಯಪ್‌' ಮೂಲಕ 25 ಲಕ್ಷ ಮಂದಿ ಜತೆ ಮಾತುಕತೆ ನಡೆಸಿದ್ದಾರೆ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

'ನಮೋ ಆ್ಯಪ್‌' ಮೂಲಕ 25 ಲಕ್ಷ ಮಂದಿ ಜತೆ ಮಾತುಕತೆ ನಡೆಸಿದ್ದಾರೆ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ನಮೋ ಆ್ಯಪ್‌  ಮೂಲಕ ಸಂವಾದ ನಡೆಸಿ ಕರ್ನಾಟಕದಲ್ಲಿ 25 ಲಕ್ಷ ಜನರ ಜತೆ ಮಾತನಾಡಿದ್ದಾರೆ. ಈ ರೀತಿ ಜನರೊಂದಿಗೆ ನಿಕಟ ಸಂಪರ್ಕ ಸಾಧಿಸಿದ ಜಗತ್ತಿನ ಏಕೈಕ ನಾಯಕ ಪ್ರಧಾನಿ ನರೇಂದ್ರ ಮೋದಿ ಎಂದು ಬಿಜೆಪಿಯ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ಹೇಳಿದ್ದಾರೆ.

ಮೇ 12ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಪ್ರಚಾರ ನಡೆಸುವುದರ ಜತೆಗೆ ಮೋದಿಯವರು ಬಿಜೆಪಿ ಪಕ್ಷದ , ಎಸ್‌ಟಿ, ಒಬಿಸಿ ಮತ್ತು ಕೊಳೆಗೇರಿ ವಿಭಾಗದ ನಾಯಕ, ಕಾರ್ಯಕರ್ತರ ಜತೆಗೂ ಸಮಾಲೋಚನೆ ನಡೆಸಿದ್ದಾರೆ.

ಒಟ್ಟು 25 ಲಕ್ಷ ಮಂದಿಯಲ್ಲಿ ಕರ್ನಾಟಕ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳು, ಕಾರ್ಯಕರ್ತರು, ಬೆಂಬಲಿಗರು,ನಾಯಕರು ಸೇರಿದ್ದಾರೆ ಎಂದು ಮಾಳವೀಯ ತಿಳಿಸಿದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.