ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಗೆ ಉಗುಳುತ್ತಿದೆ ಜ್ವಾಲಾಮುಖಿ

Last Updated 11 ಮೇ 2018, 19:30 IST
ಅಕ್ಷರ ಗಾತ್ರ

ಜಕಾರ್ತಾ: ಜಗತ್ತಿನ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾದ ಇಂಡೊನೇಷ್ಯಾದ ಜಾವಾ ದ್ವೀಪದ ಮೆರಪಿ ಜ್ವಾಲಾಮುಖಿಯು ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ಸುಮಾರು 5 ಸಾವಿರ ಮೀಟರ್‌ವರೆಗೆ ಹೊಗೆ ಹಾಗೂ ಬೂದಿಯನ್ನು ಉಗುಳುತ್ತಿದೆ.

ಮೆರಪಿ ಬೆಟ್ಟದ ಸುಮಾರು ಐದು ಕಿಲೋಮೀಟರ್‌ ವ್ಯಾಪ್ತಿಯ  ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸರ್ಕಾರ ಆದೇಶಿಸಿದೆ. ಈ ಪ್ರದೇಶದಲ್ಲಿ ಸುಮಾರು 12 ಸಾವಿರ ಜನರು ವಾಸಿಸುತ್ತಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಎಂಟು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದ್ದು, ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಸ್ಫೋಟಕ್ಕೆ ಸಜ್ಜಾದ ‘ಕಿಲೂಗೆ’ (ಲಾಸ್ ಏಂಜಲೀಸ್ ವರದಿ) : ಕಳೆದ ಕೆಲವು ದಿನಗಳಿಂದ ಹೊಗೆ ಹಾಗೂ ಬೂದಿಯನ್ನು ಹೊರಹಾಕುತ್ತಿರುವ ಹವಾಯಿ ದ್ವೀಪದ ಕಿಲೂಗೆ ಜ್ವಾಲಾಮುಖಿಯು ದೊಡ್ಡ ಮಟ್ಟದಲ್ಲಿ ಸ್ಫೋಟಗೊಳ್ಳಲು ಸಜ್ಜಾಗಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಅಮೆರಿಕದ ಅತಿದೊಡ್ಡ ದ್ವೀಪದಲ್ಲಿರುವ ಕಿಲೂಗೆ ಜ್ವಾಲಾಮುಖಿಯ ಬಾಯಿಯಲ್ಲಿ ಲಾವಾದ ಮಟ್ಟ ಕಡಿಮೆಯಾಗಿದೆ. ಅಂದರೆ ಅದು ದೊಡ್ಡ ಪ್ರಮಾಣದಲ್ಲಿ ಸ್ಫೋಟ ನಡೆಸಲು ಸಜ್ಜಾಗಿದೆ ಎಂದರ್ಥ.

ಇದು ಕೂಡಾ ಜಗತ್ತಿನ ಸಕ್ರಿಯ ಜ್ವಾಲಾಮುಖಿ. ಹವಾಯಿ ದ್ವೀಪದಲ್ಲಿರುವ ಐದು ಜ್ವಾಲಾಮುಖಿಗಳಲ್ಲಿ ಪೈಕಿ ಒಂದಾಗಿದೆ. ಈ ಜಾಗದಲ್ಲಿ ಕಳೆದ ಶುಕ್ರವಾರ 6.9 ತೀವ್ರತೆಯ ಭೂಕಂಪನವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT