7

ಚುನಾವಣೆ ‌ಸಮಯದಲ್ಲೂ ಬಸ್‌ ದರ‌ ಡಬಲ್!

Published:
Updated:
ಚುನಾವಣೆ ‌ಸಮಯದಲ್ಲೂ ಬಸ್‌ ದರ‌ ಡಬಲ್!

ಇದೊಂದು‌ ಅನ್ಯಾಯ. ಸಾಲು‌ ಸಾಲು ರಜೆಗಳು‌ ಬಂದಾಗೆಲ್ಲ ಬಸ್‌ ದರ‌ ಡಬಲ್. ಚುನಾವಣೆ ‌ಸಮಯದಲ್ಲೂ ಹೀಗಾದರೆ? ಉದಾಹರಣೆಗೆ, ನಾನಿರುವ ಊರಿಂದ ನನ್ನೂರು ಬಾಳೆಹೊನ್ನೂರಿಗೆ‌ ಹೋಗಿಬರಲು ಸುಮಾರು 2,000 ಖರ್ಚಾಗುತ್ತದೆ. ಹೀಗಿರುವಾಗ ಮತದಾನದ ಉತ್ಸಾಹ ಕುಗ್ಗುವುದಿಲ್ಲವೇ?‌ ನಿನ್ನ ಬಸ್‌ ಖರ್ಚು ಕೊಡ್ತೀನಿ, ನಂಗೇ ವೋಟು ಹಾಕು ಎಂದು ಆಮಿಷ ಒಡ್ಡುವುದಿಲ್ಲವೇ? #KarnatakaElections2018

ಗಿರೀಶ್‌ ಕಾರ್ಗದ್ದೆ, @girishkargadde

ಚುನಾವಣಾ ಆಯೋಗ: ತಪ್ಪದೇ ವೋಟ್ ಮಾಡಿ

ಬೆಂಗಳೂರಿನ ಜನತೆ: ಬೋಟ್ ವ್ಯವಸ್ಥೆ ಮಾಡಿ!

ಹರ್ಷ ಆಚಾರ್ಯ, @harshasbc

ಮೊದಲ ಮತದ ಸವಿನೆನಪಿಗೆ* ಈ ಸಲ ಮೊದಲ ಬಾರಿಗೆ ಮತ ಚಲಾಯಿಸುವ ಹೊಸ ಮತದಾರರೇ, ತಮ್ಮ ಮೊದಲ ಮತದಾನದ ಸವಿನೆನಪಿಗಾಗಿ ಒಂದು ಗಿಡ ನೆಡಿ. ನೀವು ವೋಟು ಹಾಕಿದ ಅಭ್ಯರ್ಥಿ ಸೋಲ್ತಾನೋ? ಗೆಲ್ತಾನೋ? ಗೆದ್ರೂ, ಕೈಗೆ ಸಿಗ್ತಾನೋ, ಇಲ್ಲವೋ ಗೊತ್ತಿಲ್ಲ. ಆದರೆ, ನೀವು ನೆಟ್ಟ ಗಿಡ ಮಾತ್ರ ಖಂಡಿತವಾಗಿಯೂ ಮೋಸ ಮಾಡಲ್ಲ, ನೆರಳು ಕೊಟ್ಟೇ ಕೊಡುತ್ತೆ.

ಮಂಜು ಮೈಸೂರು, @ManjuMysuru10

ಸಮಾವೇಶದಲ್ಲಿ ಸೇರಿದವರೆಲ್ಲಾ ಅದೇ ಪಕ್ಷಕ್ಕೆ ವೋಟ್ ಹಾಕ್ತಾರೆ ಅಂದುಕೊಳ್ಳೋದು, ನನ್ ಫ್ರೆಂಡ್ ಲಿಸ್ಟ್‌ನಲ್ಲಿ ಇರೋರೆಲ್ಲಾ ನಂಗೆ ಲೈಕ್ ಮಾಡ್ತಾರೆ ಅಂದುಕೊಳ್ಳೋದು ಎರಡೂ ಒಂದೇ!

ಪ್ರಸನ್ನ ವಿ.ಎಂ., @prasanna073

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry