ಸುಬ್ರಹ್ಮಣ್ಯದಲ್ಲಿ ಭಾರಿ ಮಳೆ, ಕತ್ತಲಲ್ಲಿ ಮತಗಟ್ಟೆಗಳು

4

ಸುಬ್ರಹ್ಮಣ್ಯದಲ್ಲಿ ಭಾರಿ ಮಳೆ, ಕತ್ತಲಲ್ಲಿ ಮತಗಟ್ಟೆಗಳು

Published:
Updated:

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಶುಕ್ರವಾರ ಸಂಜೆ ಏಳು ಗಂಟೆಯಿಂದ ಗುಡುಗು ಮಿಂಚು ಮಳೆ ಆರಂಭವಾಗಿದ್ದು, ವಿದ್ಯುತ್‌ ಸಂಪೂರ್ಣ ಕೈಕೊಟ್ಟಿರುವುದರಿಂದ ಚುನಾವಣಾ ಸಿಬ್ಬಂದಿ ಮೇಣದ ಬತ್ತಿ, ಟಾರ್ಚ್‌ ಹಿಡಿದು ಕೆಲಸ ಮಾಡಬೇಕಾಯಿತು.

ಮತಗಟ್ಟೆಗಳಲ್ಲಿ ವಿದ್ಯುತ್‌ ಕಡಿತ ಆದಾಗ ಬದಲಿ ವ್ಯವಸ್ಥೆಯನ್ನು ಕಲ್ಪಿಸದೇ ಇರುವುದರಿಂದ ಕತ್ತಲಲ್ಲಿಯೇ ಕೆಲಸ ನಿರ್ವಹಿಸಬೇಕಾಯಿತು. ಮುಂಜಾನೆ 5.45 ಗಂಟೆಗೇ ಮತ್ತೆ ಮತಗಟ್ಟೆಯಲ್ಲಿ ಚಟುವಟಿಕೆ ಆರಂಭಿಸಬೇಕಾಗಿರುವುದರಿಂದ ರಾತ್ರಿ ಮಾಡಬೇಕಾದ ಸಿದ್ಧತೆಗಳನ್ನು ತಡ ಮಾಡುವಂತಿಲ್ಲ ಎಂದು ಸಿಬ್ಬಂದಿಯೊಬ್ಬರು ಆತಂಕ ತೋಡಿಕೊಂಡರು.

ಸುಬ್ರಹ್ಮಣ್ಯ ಪರಿಸರದಲ್ಲಿ ಮೂರು ಮತಗಟ್ಟೆಗಳಿವೆ. ನಕ್ಸಲ್‌ಪೀಡಿತ ಪ್ರದೇಶದಲ್ಲಿರುವ ಕುಲ್ಕುಂದ, ಕೈಕಂಬ, ಕಲ್ಮಕಾರು, ಬಾಳುಗೋಡು, ಕೊಲ್ಲಮೊಗ್ರದ ಮತಗಟ್ಟೆಗಳಲ್ಲಿ ರಾತ್ರಿ ವಿದ್ಯುತ್‌ ಇಲ್ಲದೆ ಆತಂಕದಲ್ಲೇ ರಾತ್ರಿ ಕಳೆಯುವಂತಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry