ಬುಧವಾರ, ಫೆಬ್ರವರಿ 24, 2021
23 °C
ಬೆಂಗಳೂರು, ಚೆನ್ನೈ, ಮುಂಬೈ, ಹೈದರಾಬಾದ್‌ಗೆ ಸೇವೆ

ಹುಬ್ಬಳ್ಳಿ: ಇಂದಿನಿಂದ ಸ್ಪೈಸ್‌ಜೆಟ್‌ ವಿಮಾನಗಳ ಹಾರಾಟ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಇಂದಿನಿಂದ ಸ್ಪೈಸ್‌ಜೆಟ್‌ ವಿಮಾನಗಳ ಹಾರಾಟ ಆರಂಭ

ಹುಬ್ಬಳ್ಳಿ: ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿರುವ ಸ್ಪೈಸ್‌ಜೆಟ್‌, ಉಡಾನ್ ಯೋಜನೆಯಡಿ ಸೋಮವಾರದಿಂದ (ಮೇ 14) ಬೆಂಗಳೂರು, ಮುಂಬೈ, ಹೈದರಾಬಾದ್‌ ಹಾಗೂ ಚೆನ್ನೈ ನಗರಗಳಿಗೆ ಹುಬ್ಬಳ್ಳಿಯಿಂದ ನೇರ ವಿಮಾನಯಾನ ಸೇವೆ ಒದಗಿಸಲಿದೆ.

ಕಳೆದ ವರ್ಷ ದೆಹಲಿಯಲ್ಲಿ ನಡೆದ ಹರಾಜಿನಲ್ಲಿ ಎರಡನೇ ಹಂತದ ನಗರಗಳಿಗೆ ವಾಯುಯಾನ ಸೌಲಭ್ಯ ಕಲ್ಪಿಸುವುದಕ್ಕೆ ಸ್ಪೈಸ್‌ಜೆಟ್‌, ಇಂಡಿಗೊ, ಗೋ ಏರ್‌ ಸೇರಿದಂತೆ ಹಲವು ಸಂಸ್ಥೆಗಳು ಮುಂದೆ ಬಂದಿದ್ದವು.

ಇಂಡಿಗೊ ಹಾಗೂ ಗೊಡಾವತ್‌ ವಿಮಾನಯಾನ ಸಂಸ್ಥೆಗಳು ಕೆಲವೇ ದಿನಗಳಲ್ಲಿ ಇತರ ನಗರಗಳಿಗೆ ಸೇವೆ ನೀಡುವುದಾಗಿ ಪ್ರಕಟಿಸಿವೆ. ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ ಸಂಸ್ಥೆ ಹುಬ್ಬಳ್ಳಿ–ಬೆಂಗಳೂರು, ಹುಬ್ಬಳ್ಳಿ–ಮುಂಬೈ ಮಧ್ಯೆ ಈಗಾಗಲೇ ಸೇವೆ ನೀಡುತ್ತಿದೆ.

ಈ ಕುರಿತು ‘‍ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕಿ ಅಹಿಲ್ಯಾ ಕಾಕೋಡಿಕರ್‌, ‘ಸ್ಪೈಸ್‌ಜೆಟ್‌ ಸೋಮವಾರದಿಂದ ಪ್ರತಿದಿನ ಸೇವೆ ಆರಂಭಿಸಲಿದೆ. ಅದಕ್ಕಾಗಿ ಆ ಸಂಸ್ಥೆಗೆ ಟಿಕೆಟ್‌ ಕೌಂಟರ್ ಹಂಚಿಕೆ ಮಾಡಲಾಗಿದೆ’ ಎಂದರು.

ಸ್ಪೈಸ್‌ಜೆಟ್‌ ವೇಳಾಪಟ್ಟಿ

* ಹುಬ್ಬಳ್ಳಿ– ಮುಂಬೈ

ಮಧ್ಯಾಹ್ನ 12.25

ಮಧ್ಯಾಹ್ನ 1.35

* ಹುಬ್ಬಳ್ಳಿ – ಹೈದರಾಬಾದ್‌

ಬೆ. 11.45 ಮ. 12.55

* ಹುಬ್ಬಳ್ಳಿ –ಚೆನ್ನೈ

ಬೆ. 9.25 ಸಂ. 6.25

ಸಂ. 4.25 ರಾ. 10.45

l ಹುಬ್ಬಳ್ಳಿ–ಬೆಂಗಳೂರು

ಬೆ. 9.25 ಬೆ. 10.50

ಸಂ. 4.25 ಸಂ. 5.35

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.