ಗೋವಾದಲ್ಲಿ ಸರ್ಕಾರ ರಚನೆಗೆ ಕಾಂಗ್ರೆಸ್‌ ಕಸರತ್ತು: ಶುಕ್ರವಾರ ರಾಜ್ಯಪಾಲರ ಮುಂದೆ ಪರೇಡ್‌ ನಡೆಸಲು ಶಾಸಕರು ಸಜ್ಜು

7
ಅತಿ ದೊಡ್ಡ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿ?

ಗೋವಾದಲ್ಲಿ ಸರ್ಕಾರ ರಚನೆಗೆ ಕಾಂಗ್ರೆಸ್‌ ಕಸರತ್ತು: ಶುಕ್ರವಾರ ರಾಜ್ಯಪಾಲರ ಮುಂದೆ ಪರೇಡ್‌ ನಡೆಸಲು ಶಾಸಕರು ಸಜ್ಜು

Published:
Updated:
ಗೋವಾದಲ್ಲಿ ಸರ್ಕಾರ ರಚನೆಗೆ ಕಾಂಗ್ರೆಸ್‌ ಕಸರತ್ತು: ಶುಕ್ರವಾರ ರಾಜ್ಯಪಾಲರ ಮುಂದೆ ಪರೇಡ್‌ ನಡೆಸಲು ಶಾಸಕರು ಸಜ್ಜು

ಬೆಂಗಳೂರು: ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನ ಪಡೆದಿರುವ ಬಿಜೆಪಿಗೆ ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ನೀಡಿರುವ ಬೆನ್ನಲೇ ಗೋವಾದಲ್ಲಿ  ಸರ್ಕಾರ ರಚನೆ ಹಕ್ಕು ಮಂಡನೆಗೆ ಕಾಂಗ್ರೆಸ್‌ ಸಜ್ಜಾಗಿದೆ.

ಗೋವಾ ಕಾಂಗ್ರೆಸ್‌ ಉಸ್ತುವಾರಿ ಹೊತ್ತಿರುವ ಚೆಲ್ಲ ಕುಮಾರ್‌ ಗುರುವಾರ ಗೋವಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಶುಕ್ರವಾರ ಅಲ್ಲಿನ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ.

ಗೋವಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್‌ಗೆ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ರಾಜ್ಯಪಾಲರಲ್ಲಿ ಮನವಿ ಮಾಡುವುದಾಗಿ ಚೆಲ್ಲ ಕುಮಾರ್‌ ಹೇಳಿದ್ದಾರೆ.

ಇತರ ಪಕ್ಷಗಳ ಮುಖಂಡರೂ ಕಾಂಗ್ರೆಸ್‌ ಶಾಸಕರೊಂದಿಗೆ ತೆರಳಲಿದ್ದು, ಅಗತ್ಯವಾದಲ್ಲಿ ರಾಜಭವನದಲ್ಲಿ ಶಾಸಕರ ಪರೇಡ್‌ ಕೂಡ ನಡೆಸಲು ಸಿದ್ಧತೆ ನಡೆದಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry