ಶುಕ್ರವಾರ, ಫೆಬ್ರವರಿ 26, 2021
29 °C

ಪ್ರತಾಪಗೌಡ ನಡೆ ಇನ್ನೂ‌ ನಿಗೂಢ: ಶನಿವಾರ ಪ್ರತ್ಯಕ್ಷ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರತಾಪಗೌಡ ನಡೆ ಇನ್ನೂ‌ ನಿಗೂಢ: ಶನಿವಾರ ಪ್ರತ್ಯಕ್ಷ ಸಾಧ್ಯತೆ

ಮಸ್ಕಿ (ರಾಯಚೂರು): ಗುರುವಾರ ಬೆಳಿಗ್ಗೆಯಿಂದ ಸಂಪರ್ಕ ಕಡಿದುಕೊಂಡಿರುವ ಮಸ್ಕಿ‌ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರತಾಪಗೌಡ ಪಾಟೀಲ ಅವರ ಮುಂದಿನ ನಡೆ ಇನ್ನೂ‌ ನಿಗೂಢವಾಗಿದೆ.

ಮೇ‌ 16ರಂದು ಶಾಸಕಾಂಗ ಸಭೆಯಲ್ಲಿ ಪಾಲ್ಗೊಂಡಿದ್ದ ಅವರನ್ನು ಬಿಜೆಪಿ ಶಾಸಕ ಬಿ.ಶ್ರೀರಾಮುಲ ಸಂಪರ್ಕ ಮಾಡಿದ್ದಾರೆ. ಅಲ್ಲಿಂದ ಅವರ ಮೊಬೈಲ್ ಸಂಪರ್ಕ ಕಡಿತಗೊಂಡಿದೆ. ಇದೂವರೆಗೂ ಪ್ರತಾಪಗೌಡ ಅವರಾಗಲಿ, ಕಾಂಗ್ರೆಸ್‌ನ ತಾಲ್ಲೂಕು‌ ಘಟಕದ ಅಧ್ಯಕ್ಷರಾಗಲಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರ ಮೊಬೈಲ್‌ಗೆ ಕರೆ ಮಾಡಿದರೆ ‘ನಾಟ್ ರೀಚಬಲ್’ ಅಥವಾ ‘ಸ್ವಿಚ್ ಆಫ್‌’ ಎಂದು ಕೇಳಿ ಬರುತ್ತಿದೆ.

ಕುಟುಂಬದ ಸ್ಪಷ್ಟನೆ: ‘ಶಾಸಕರು ಹೃದಯಬೇನೆಯಿಂದ ಬಳಲುತ್ತಿದ್ದು, ಅವರಿಗೆ ವಿಶ್ರಾಂತಿ ಅವಶ್ಯವಿತ್ತು. ಚುನಾವಣೆ ಸಂದರ್ಭದಲ್ಲಿ ಹೆಚ್ಚಿನ ಒತ್ತಡ ಬಿದ್ದಿದ್ದರಿಂದ ಹೊರ ರಾಜ್ಯದ ನಿಸರ್ಗ ಚಿಕಿತ್ಸಾಲಯದಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಬೆಳಿಗ್ಗೆ ಬೆಂಗಳೂರಿಗೆ ಬರುತ್ತಾರೆ’ ಎಂದು ಕುಟುಂಬದ ಸದಸ್ಯರು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.