ಬುಧವಾರ, 22–5–1968

7

ಬುಧವಾರ, 22–5–1968

Published:
Updated:

ಶುದ್ಧಕತ್ತೆ!

ಬೆಂಗಳೂರು, ಮೇ 21– ಭಾರತದ ಪ್ರಜಾಪ್ರಭುತ್ವ ಇಂದು ‘ಶುದ್ಧ ಕತ್ತೆ’ ಆಗಿದೆ!

ಇದು ಶ್ರೀ ಕೆಂಗಲ್ ಹನುಮಂತಯ್ಯನವರ ಅಭಿಪ್ರಾಯ.

ಕತ್ತೆ ಮರಿಯಾಗಿದ್ದಾಗ ನೋಡಲು ತುಂಬಾ ಚೆನ್ನಾಗಿರುತ್ತದೆ. 1947ರಲ್ಲಿ ಭಾರತದಲ್ಲಿ ಆರಂಭವಾದಾಗ ಪ್ರಜಾಪ್ರಭುತ್ವ ಚೆನ್ನಾಗಿತ್ತು.

‘ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಮಂತ್ರಿ ಮಂಡಲಗಳು ಪುಟ್ಟದಾಗಿರುತ್ತಿದ್ದವು. ರಾಜಾಜಿ, ಬಿ.ಜಿ. ಖೇರ್, ಗೋವಿಂದವಲ್ಲಭ ಪಂತ್ ಅಂತಹವರು ಮುಖ್ಯಮಂತ್ರಿಗಳಾಗಿದ್ದರು. ಮೈಸೂರಿನಲ್ಲಿ ನನ್ನನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿದ್ದೀರಿ’.

‘ಪ್ರಜಾ ಪ್ರಭುತ್ವ ಬೆಳೆಯುತ್ತಾ ಬೆಳೆಯುತ್ತಾ 1962ರಲ್ಲಿ ಕತ್ತೆ ಆಯಿತು. 67ರಲ್ಲಿ ಶುದ್ಧ ಕತ್ತೆಯಾಯಿತು. 30–40 ಮಂತ್ರಿಗಳಾದರು. ‘ಬೆಂಗಳೂರು ಸಿಟಿಜನ್ಸ್ ಫ್ರೀ ಫೋರಂ’ ಆಶ್ರಯದಲ್ಲಿ ‘ನಾಯಕರ ಚುನಾವಣೆ’ ವಿಷಯ ಕುರಿತು ಮಾತನಾಡಿದರು.

**

ಒಮ್ಮತಕ್ಕೆ ಯತ್ನಿಸಲು ಶಾಸಕರಿಗೆ ಎಸ್ಸೆನ್ ಕರೆ

ಬೆಂಗಳೂರು, ಮೇ 21– ಕಾಂಗ್ರೆಸ್ ಪಕ್ಷದ ನಾಯಕರ ಆಯ್ಕೆ ಬಗ್ಗೆ ‘ಒಪ್ಪಂದಕ್ಕೆ ಬರಲು ಪ್ರಯತ್ನಿಸಿ’ ಎಂದು ತಮ್ಮನ್ನು ಭೇಟಿ ಮಾಡುವ ಕಾಂಗ್ರೆಸ್ ಶಾಸಕರಿಗೆ ಸಲಹೆ ಮಾಡುತ್ತಿರುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ‘ಒಪ್ಪಂದ ಸಾಧ್ಯವಾಗದಿದ್ದರೆ, ಚುನಾವಣೆ ನಡೆಯಲಿ’ ಎಂದು ರಾತ್ರಿ ವರದಿಗಾರರಿಗೆ ತಿಳಿಸಿದರು.

**

ನಾಯಕರಾಗಿ ಸಮರ್ಥ ಪ್ರಾಮಾಣಿಕ ವ್ಯಕ್ತಿ ಆಯ್ಕೆಗೆ ಎಚ್.ಎಂ.ಸಿ. ಕರೆ

ಬೆಂಗಳೂರು, ಮೇ 21– ಮುಂಬರುವ ವಿಪತ್ತುಗಳನ್ನು ತಪ್ಪಿಸಲು ಸಮರ್ಥರಿರುವ ಅಥವಾ ಆ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವ ವ್ಯಕ್ತಿಯನ್ನು ಕಾಂಗ್ರೆಸ್ ಶಾಸಕ ಪಕ್ಷದ ನಾಯಕರನ್ನಾಗಿ ಆರಿಸಬೇಕೆಂದು ಮಾಜಿ ಸಚಿವ ಶ್ರೀ ಎಚ್.ಎಂ. ಚನ್ನಬಸಪ್ಪ ಅವರು ‘ಸಾರ್ವಜನಿಕರ ಪರವಾಗಿ’ ರಾಜ್ಯದ ಕಾಂಗ್ರೆಸ್ ಶಾಸಕರನ್ನು ಪ್ರಾರ್ಥಿಸಿದ್ದಾರೆ.

**

ಜನಮತಗಣನೆ: ಡಿಗಾಲ್ ಆಲೋಚನೆ

ಪ್ಯಾರಿಸ್, ಮೇ 21– ಗಲಭೆಗಳ ಅಂತ್ಯಕ್ಕಾಗಿ ಪ್ರಯತ್ನಿಸಲು ಅಧ್ಯಕ್ಷ ಡಿಗಾಲ್ ಅವರು ರಾಷ್ಟ್ರಾದ್ಯಂತ ಜನಮತಗಣನೆ ನಡೆಸುವ ಆಲೋಚನೆಯಲ್ಲಿದ್ದಾರೆಂದು ವರದಿಯಾಗಿದೆ.

ಗಲಭೆಗಳಲ್ಲಿ ಶಿಕ್ಷೆಗೆ ಗುರಿಯಾದವರಿಗೆಲ್ಲ ಅವರಿಂದು ಕ್ಷಮಾದಾನ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry