ಶಿಕ್ಷಕರ ಕ್ಷೇತ್ರಕ್ಕೆ 22 ನಾಮಪತ್ರ ಸಲ್ಲಿಕೆ

7

ಶಿಕ್ಷಕರ ಕ್ಷೇತ್ರಕ್ಕೆ 22 ನಾಮಪತ್ರ ಸಲ್ಲಿಕೆ

Published:
Updated:

ಬೆಂಗಳೂರು: ವಿಧಾನ ಪರಿಷತ್‌ನ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ 22 ಅಭ್ಯರ್ಥಿಗಳು ಹಾಗೂ ಬೆಂಗಳೂರು ಪದವೀಧರ ಕ್ಷೇತ್ರಕ್ಕೆ 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಆಗ್ನೇಯ ಶಿಕ್ಷಕರ ಕ್ಷೇತ್ರದ ರಮೇಶ್‌ ಬಾಬು, ಬೆಂಗಳೂರು ಪದವೀಧರ ಕ್ಷೇತ್ರದ ರಾಮಚಂದ್ರೇಗೌಡ ಜೂನ್‌ 21ರಂದು ನಿವೃತ್ತಿ ಆಗುವುದರಿಂದ ಈ ಸ್ಥಾನಗಳು ತೆರವಾಗಲಿವೆ.

ಈ ಕ್ಷೇತ್ರಗಳಿಗೆ ಜೂನ್‌ 8ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿತ್ತು.

ಬಿಜೆಪಿಯು ರಾಮಚಂದ್ರೇಗೌಡರ ಬದಲಿಗೆ ಅ.ದೇವೇಗೌಡರಿಗೆ ಟಿಕೆಟ್‌ ನೀಡಿದೆ. ಕಾಂಗ್ರೆಸ್‌ನಿಂದ ರಾಮೋಜಿ ಗೌಡ, ಜೆಡಿಎಸ್‌ನಿಂದ ಅಚ್ಚೇಗೌಡ ಶಿವಣ್ಣ ಕಣಕ್ಕೆ ಇಳಿದಿದ್ದಾರೆ.

ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿಯಿಂದ ವೈ.ಎ.ನಾರಾಯಣಸ್ವಾಮಿ, ಕಾಂಗ್ರೆಸ್‌ನಿಂದ ಎಂ. ರಾಮಪ್ಪ, ಜೆಡಿಎಸ್‌ನಿಂದ ರಮೇಶ್‌ಬಾಬು ಹುರಿಯಾಳುಗಳು.

ಅಭ್ಯರ್ಥಿಗಳ ಆಸ್ತಿ ವಿವರ

ಅಭ್ಯರ್ಥಿ– ವೈ.ಎ. ನಾರಾಯಣಸ್ವಾಮಿ

ಕ್ಷೇತ್ರ/ಪಕ್ಷ– ಆಗ್ನೇಯ ಶಿಕ್ಷಕರ ಕ್ಷೇತ್ರ/ ಬಿಜೆಪಿ

ಶಿಕ್ಷಣ– ಬಿ.ಇ

ಕೈಯಲ್ಲಿರುವ ನಗದು– ₹13.06 ಲಕ್ಷ

ಪತ್ನಿಯ ಬಳಿಯಿರುವ ನಗದು– ₹8 ಲಕ್ಷ

ಚರಾಸ್ತಿ ಮೌಲ್ಯ– ₹1.61 ಕೋಟಿ

ಪತ್ನಿ ಹೆಸರಲ್ಲಿರುವ ಚರಾಸ್ತಿ ಮೌಲ್ಯ–₹1.14 ಲಕ್ಷ

ಸ್ಥಿರಾಸ್ತಿ ಮೌಲ್ಯ–₹11.24 ಕೋಟಿ

ಪತ್ನಿ ಹೆಸರಲ್ಲಿರುವ ಸ್ಥಿರಾಸ್ತಿ ಮೌಲ್ಯ– ₹4.73 ಕೋಟಿ

ಸಾಲದ ಮೊತ್ತ– ₹2.94 ಲಕ್ಷ

ಪತ್ನಿಯ ಸಾಲ– ₹9.45 ಕೋಟಿ

ಅಭ್ಯರ್ಥಿ: ಎಂ.ರಾಮಪ್ಪ

ಕ್ಷೇತ್ರ/ಪಕ್ಷ – ಆಗ್ನೇಯ ಶಿಕ್ಷಕರ ಕ್ಷೇತ್ರ/ಕಾಂಗ್ರೆಸ್

ಶಿಕ್ಷಣ: ಎಂ.ಎ(ಅರ್ಥಶಾಸ್ತ್ರ), ಬಿ.ಎಡ್‌

ಕೈಯಲ್ಲಿರುವ ನಗದು; ₹50 ಸಾವಿರ

‍ಪತ್ನಿಯ ಬಳಿಯಿರುವ ನಗದು; ₹50 ಸಾವಿರ

ಚರಾಸ್ತಿ ಮೌಲ್ಯ: ₹2.88 ಕೋಟಿ

‍ಪತ್ನಿ ಹೆಸರಿನಲ್ಲಿರುವ ಚರಾಸ್ತಿ ಮೌಲ್ಯ – ₹1.26 ಕೋಟಿ

ಸ್ಥಿರಾಸ್ತಿ ಮೌಲ್ಯ – ₹4.87 ಕೋಟಿ

ಪತ್ನಿ ಹೆಸರಿನಲ್ಲಿರುವ ಸ್ಥಿರಾಸ್ತಿ ಮೌಲ್ಯ – ₹2.48 ಕೋಟಿ

ಸಾಲದ ಮೊತ್ತ – ₹1.64 ಕೋಟಿ

ಪತ್ನಿಯ ಸಾಲ – ₹1.08 ಕೋಟಿ

ಅಭ್ಯರ್ಥಿ;ರಾಮೋಜಿಗೌಡ

ಕ್ಷೇತ್ರ/ಪಕ್ಷ;ಪದವೀಧರ/ ಕಾಂಗ್ರೆಸ್‌

ಶಿಕ್ಷಣ;ಎಂ.ಎ

ಚರಾಸ್ತಿ ಮೌಲ್ಯ;₹4.93 ಕೋಟಿ

ಪತ್ನಿ ಹೆಸರಲ್ಲಿರುವ ಚರಾಸ್ತಿ ಮೌಲ್ಯ;₹21.36 ಲಕ್ಷ

ಸ್ಥಿರಾಸ್ತಿ ಮೌಲ್ಯ;₹9.01 ಕೋಟಿ

ಪತ್ನಿ ಹೆಸರಲ್ಲಿರುವ ಸ್ಥಿರಾಸ್ತಿ ಮೌಲ್ಯ;₹62.69 ಲಕ್ಷ

ಸಾಲದ ಮೊತ್ತ;₹3.34 ಕೋಟಿ

ಪತ್ನಿಯ ಸಾಲ;₹18.44 ಲಕ್ಷಅಭ್ಯರ್ಥಿ;ಎ.ದೇವೇಗೌಡ

ಕ್ಷೇತ್ರ/ಪಕ್ಷ;ಪದವೀಧರ/ಬಿಜೆಪಿ

ಶಿಕ್ಷಣ;ಎಂ.ಎ

ಚರಾಸ್ತಿ ಮೌಲ್ಯ;₹33.79 ಲಕ್ಷ

ಪತ್ನಿ ಹೆಸರಲ್ಲಿರುವ ಚರಾಸ್ತಿ ಮೌಲ್ಯ;₹16.36 ಲಕ್ಷ

ಸ್ಥಿರಾಸ್ತಿ ಮೌಲ್ಯ;₹20 ಲಕ್ಷ

ಪತ್ನಿ ಹೆಸರಲ್ಲಿರುವ ಸ್ಥಿರಾಸ್ತಿ ಮೌಲ್ಯ;₹2.66 ಕೋಟಿ

ಸಾಲದ ಮೊತ್ತ;₹4.40 ಲಕ್ಷ

ಪತ್ನಿಯ ಸಾಲ;₹9.46 ಲಕ್ಷ

 

ಅಚ್ಚೇಗೌಡ ಆಸ್ತಿ

ಅಭ್ಯರ್ಥಿ;ಅಚ್ಚೇಗೌಡ ಶಿವಣ್ಣ

ಕ್ಷೇತ್ರ/ಪಕ್ಷ;ಪದವೀಧರರ ಕ್ಷೇತ್ರ/ಜೆಡಿಎಸ್

ಶಿಕ್ಷಣ;ಎಂಎ

ಚರಾಸ್ತಿ ಮೌಲ್ಯ;₹ 48.98 ಕೋಟಿ

ಪತ್ನಿ ಹೆಸರಲ್ಲಿರುವ ಚರಾಸ್ತಿ ಮೌಲ್ಯ;₹8.91 ಲಕ್ಷ

ಸ್ಥಿರಾಸ್ತಿ ಮೌಲ್ಯ;₹ 8.20 ಕೋಟಿ

ಪತ್ನಿ ಹೆಸರಿನಲ್ಲಿ ಸ್ಥಿರಾಸ್ತಿ; ಇಲ್ಲ

ಸಾಲ;₹82.94 ಲಕ್ಷ

ಪತ್ನಿಯ ಸಾಲ; ಇಲ್ಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry