ಪರಿಸರ ಉಳಿಸಲು ಕರೆ

7

ಪರಿಸರ ಉಳಿಸಲು ಕರೆ

Published:
Updated:

ಬೆಂಗಳೂರು: ’ನಮ್ಮ ಹಿರಿಯರಿಗೆ ಇದ್ದ ಪರಿಸರ ಸಂರಕ್ಷಣೆಯ ಕಾಳಜಿಯನ್ನು ನಿರ್ಲಕ್ಷಿಸಿದ ಪರಿಣಾಮ ಇಂದು ನಾವುಗಳು ಪರಿಸರಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ’ ಎಂದು ಬಿಬಿಎಂಪಿ ಸದಸ್ಯೆ ಶಾರದಾ ಜಿ.ಮುನಿರಾಜು ಕಳವಳ ವ್ಯಕ್ತಪಡಿಸಿದರು.

ವಿನಾಯಕ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಸಿಗಳನ್ನು ವಿತರಿಸಿ ಅವರು ಮಾತನಾಡಿದರು.

‘ಮಳೆಗಾಲ ಪ್ರಾರಂಭವಾಗಿರುವುದರಿಂದ ಪ್ರತಿಯೊಬ್ಬ ನಾಗರಿಕರು ತಮ್ಮ ಮನೆಯ ಸುತ್ತಮುತ್ತ ಹಣ್ಣು, ಹೂವು, ಮತ್ತು ನೆರಳು ನೀಡುವಂತಹ ಗಿಡಗಳನ್ನು ನೆಡಬೇಕು. ಈ ಮೂಲಕ ಪರಸರ ಸಂರಕ್ಷಣೆಗೆ ಕಾಳಜಿ ವಹಿಸದೇ ಇದ್ದರೆ ಮುಂದಾಗುವ ಅನಾಹುತಗಳಿಗೆ ನಾವೇ ಜವಾಬ್ದಾರರಾಗಬೇಕಾಗುತ್ತದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry