306 ಅಂಶ ಕುಸಿದ ಸಂವೇದಿ ಸೂಚ್ಯಂಕ

7

306 ಅಂಶ ಕುಸಿದ ಸಂವೇದಿ ಸೂಚ್ಯಂಕ

Published:
Updated:
306 ಅಂಶ ಕುಸಿದ ಸಂವೇದಿ ಸೂಚ್ಯಂಕ

ಮುಂಬೈ: ಷೇರುಗಳ ಮಾರಾಟದ ಒತ್ತಡದಿಂದಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಬುಧವಾರದ ವಹಿವಾಟಿನಲ್ಲಿ 306 ಅಂಶಗಳಿಗೆ ಎರವಾಗಿದೆ.

ಇಂಧನ ಮತ್ತು ಲೋಹದ ಷೇರುಗಳಲ್ಲಿ ಮಾರಾಟ ಒತ್ತಡ ಹೆಚ್ಚಿಗೆ ಇತ್ತು. ಪೆಟ್ರೋಲ್‌ ಮತ್ತು ಡೀಸೆಲ್‌ಗಳ ದುಬಾರಿ ದರದ ಹೊರೆಯನ್ನು ಹಂಚಿಕೊಳ್ಳಲು ಮುಂದಾಗಬೇಕು ಎಂದು ಕೇಂದ್ರ ಸರ್ಕಾರವು ತೈಲ ಮಾರಾಟ ಸಂಸ್ಥೆಗಳಿಗೆ ಕೇಳಿಕೊಂಡಿರುವುದರಿಂದ ಎಚ್‌ಪಿಸಿಎಲ್‌, ಬಿ‍ಪಿಸಿಎಲ್‌, ಐಒಸಿ ಮತ್ತು ಒಎನ್‌ಜಿಸಿ ಷೇರುಗಳ ಬೆಲೆಗಳು ಕುಸಿತ ದಾಖಲಿಸಿದವು.

ದಿನದ ಆರಂಭದಲ್ಲಿ ಸೂಚ್ಯಂಕವು 34,656 ಅಂಶಗಳೊಂದಿಗೆ ಗರಿಷ್ಠ ಮಟ್ಟದಲ್ಲಿಯೇ ವಹಿವಾಟು ಆರಂಭಿಸಿತ್ತು. ವಹಿವಾಟಿನ ಒಂದು ಹಂತದಲ್ಲಿ 34,302 ಅಂಶಗಳಿಗೆ ಕುಸಿದಿತ್ತು. ಅಂತಿಮವಾಗಿ 306 ಅಂಶಗಳ ನಷ್ಟದೊಂದಿಗೆ 34,344 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ಏಪ್ರಿಲ್‌ 19ರ ನಂತರದ ಅತಿ ಕಡಿಮೆ ಮಟ್ಟ ಇದಾಗಿದೆ. ಅಂದು ಸೂಚ್ಯಂಕವು 34,427 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತ್ತು.

ರಾಷ್ಟ್ರೀಯ ಷೇರುಪೇಟೆ (ನಿಫ್ಟಿ) 106 ಅಂಶಗಳ ಕುಸಿತ ಕಂಡು 10,500 ಅಂಶಗಳ ಗಡಿ ಇಳಿಯಿತು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry