ಸೋಮವಾರ, ಜುಲೈ 4, 2022
22 °C

ಆಲಿಯಾ ಮದುವೆ ಯಾವಾಗ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಿಯಾ ಮದುವೆ ಯಾವಾಗ?

ನಟಿ ಅಲಿಯಾ ಭಟ್‌ ತಮ್ಮ ಮದುವೆ ವಿಚಾರದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಕೆಲ ತಿಂಗಳುಗಳಿಂದ ಅಲಿಯಾ ಹಾಗೂ ರಣಬೀರ್‌ ಕಪೂರ್‌ ಒಟ್ಟಾಗಿ ಡೇಟಿಂಗ್‌ ನಡೆಸುತ್ತಿದ್ದಾರೆ ಎಂಬ ಗಾಳಿಸುದ್ದಿ ಕೇಳಿಬರುತ್ತಿತ್ತು. ಈಗ ಅಲಿಯಾ ಭಟ್‌ ಅತಿ ಬೇಗ ಮದುವೆಯಾಗಬೇಕು ಎಂದು ಮನದ ಆಸೆ ವ್ಯಕ್ತಪಡಿಸಿದ್ದಾರೆ. ‘ನನಗೆ ಮದುವೆ ಬಗ್ಗೆ ಯಾವುದೇ ಯೋಜನೆಗಳಿಲ್ಲ. ಸದ್ಯದಲ್ಲಿ ನಾನು ಮದುವೆಯಾಗಬಹುದು. ಬೇಗ ಮದುವೆಯಾಗಿ ಎಲ್ಲರಿಗೂ ಸರ್‌ಪ್ರೈಸ್‌ ಕೊಡಬೇಕೆಂದಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

"ಜೀವನದಲ್ಲಿ ಸಂತೋಷದ ಸಂಗತಿಗಳು ಬೇಗ ಬೇಗ ನಡೆಯಬೇಕು. ಜನರು ನಾನು 30 ವಯಸ್ಸಿನಲ್ಲಿ ಮದುವೆಯಾಗಬಹುದು ಎಂದು ನಿರೀಕ್ಷಿಸುತ್ತಿದ್ದಾರೆ. ಆದರೆ ನಾನು ಅದಕ್ಕಿಂತ ಮೊದಲೇ ಮದುವೆಯಾಗಿ ನನಗೇ ನಾನೇ ಸರ್‌ಪ್ರೈಸ್‌ ಕೊಡಬೇಕೆಂದಿದ್ದೇನೆ’ ಎಂದು ಇಂಗಿತ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.