ಟೆಕಿ ಆತ್ಮಹತ್ಯೆ; ಸಾಫ್ಟ್‌ವೇರ್‌ ಕಂಪನಿ ವಿರುದ್ಧ ದೂರು

7

ಟೆಕಿ ಆತ್ಮಹತ್ಯೆ; ಸಾಫ್ಟ್‌ವೇರ್‌ ಕಂಪನಿ ವಿರುದ್ಧ ದೂರು

Published:
Updated:

ಬೆಂಗಳೂರು: ವೈಟ್‌ಫೀಲ್ಡ್‌ ಬಳಿಯ ಐಟಿಪಿಎಲ್‌ ಕಟ್ಟಡದ 12ನೇ ಮಹಡಿಯಿಂದ ಬಿದ್ದು ಉದ್ಯೋಗಿ ಭವೇಶ್‌ ಜೈಸ್ವಾಲ್‌ (23) ಎಂಬುವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ‘ಎಂ.ಯು ಸಿಗ್ಮಾ’ ಸಾಫ್ಟ್‌ವೇರ್‌ ಕಂಪನಿ ವಿರುದ್ಧ ದೂರು ದಾಖಲಾಗಿದೆ.

ಮಧ್ಯಪ್ರದೇಶ ಮೂಲದ ಭವೇಶ್‌, ವರ್ಷದ ಹಿಂದಷ್ಟೇ ನಗರಕ್ಕೆ ಬಂದು ಕೆಲಸಕ್ಕೆ ಸೇರಿಕೊಂಡಿದ್ದರು. ಅವರ ಸಾವಿಗೆ ಕಂಪನಿಯಲ್ಲಿ ನೀಡುತ್ತಿದ್ದ ಕಿರುಕುಳವೇ ಕಾರಣವೆಂದು ಆರೋಪಿಸಿ, ಈತನ ತಂದೆ ಮಹೇಂದ್ರ ಜೈಸ್ವಾಲ್‌, ವೈಟ್‌ಫೀಲ್ಡ್‌ ಠಾಣೆಗೆ ದೂರು ನೀಡಿದ್ದಾರೆ.

ಮಹೇಂದ್ರ ನೀಡಿರುವ ದೂರಿನನ್ವಯ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಈ ಸಂಬಂಧ ಕಂಪನಿಯ ಆಡಳಿತ ಮಂಡಳಿಯವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ಹೇಳಿದರು.

‘ಕಂಪನಿಯಲ್ಲಿ ಮಗನಿಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿತ್ತು. ಆ ಬಗ್ಗೆ ಆತ, ನನ್ನ ಬಳಿಯೂ ಅಳಲು ತೋಡಿಕೊಂಡಿದ್ದ. ಆತನಿಗೆ ಕಿರುಕುಳ ನೀಡಿದ್ದ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ತಂದೆ ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ಹೇಳಿದರು. ಮಹೇಂದ್ರ ಅವರು ರೈಲ್ವೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry