ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಸೆರೆವಾಸ ಅನುಭವಿಸುತ್ತಿರುವ ಮೊಹಮದ್ ನಲಪಾಡ್‌ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರಿದ್ದ ಏಕಸದಸ್ಯ ನ್ಯಾಯಪೀಠವು ವಿಚಾರಣೆ ನಡೆಸಿತ್ತು.
ಷರತ್ತುಗಳು:
* ಸಾಕ್ಷಿ ನಾಶಪಡಿಸಿಬಾರದು.
* ಅಗತ್ಯವಿದ್ದರೆ ಕಡ್ಡಾಯವಾಗಿ ತನಿಖೆಗೆ ಸಹಕರಿಸಬೇಕು.
* ಅಧೀನ ನ್ಯಾಯಾಲಯದ ವಿಚಾರಣೆ ಹಾಜರಾಗಬೇಕು.
* ಅನುಮತಿಯಿಲ್ಲದೇ ರಾಜ್ಯದಿಂದ ಹೊರಗೆ ಹೋಗಬಾರದು.
*2 ಲಕ್ಷ ಮೌಲ್ಯದ ಬಾಂಡ್ ಹಾಗೂ ಇಬ್ಬರು ಶ್ಯೂರಿಟಿ ನೀಡಬೇಕು.
**
ಜಾಮೀನು ಮಂಜೂರು ಮಾಡಿದ ನಂತರದ ಪ್ರಕ್ರಿಯೆಗಳು:
* ಹೈಕೋರ್ಟ್ ಆದೇಶದ ಪುತ್ರಿಯನ್ನು ನಲಪಾಡ್ ಪರ ವಕೀಲರಿಗೆ ನೀಡಬೇಕು.
* ಆದೇಶದ ಪ್ರತಿ ಪಡೆದ ನಂತರ ಷರತ್ತುಗಳನ್ನು ಗಮನಿಸಬೇಕು.
* ವೈಯಕ್ತಿಕ ಬಾಂಡ್, ಭದ್ರತಾ ಶ್ಯೂರಿಟಿ ಸೇರಿದಂತೆ ಉಳಿದ ಷರತ್ತುಗಳನ್ನು ಪೂರೈಸಲು ಸಿದ್ದತೆ ನಡೆಸಿಕೊಳ್ಳಬೇಕು.
* ಬಳಿಕ ಸೆಷನ್ಸ್ ಕೋರ್ಟ್ ನಲ್ಲಿ ಷರತ್ತುಗಳನ್ನು ಪೂರೈಸಬೇಕು.
* ಷರತ್ತು ಪರಿಶೀಲಿಸಿದ ಬಳಿಕ ಬಿಡುಗಡೆ ಆದೇಶ ಪ್ರತಿ ನೀಡಲಿರುವ ಸೆಷನ್ಸ್ ಕೋರ್ಟ್.
* ಬಿಡುಗಡೆ ಆದೇಶ ಪತ್ರಿ ಪಡೆದ ಬಳಿಕ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ತಲುಪಿಸಬೇಕು.
* ಬಿಡುಗಡೆ ಆದೇಶದ ಪತ್ರಿಯನ್ನು ಜೈಲರ್ ಪರಿಶೀಲಿಸಬೇಕು.
* ಬಿಡುಗಡೆ ಆದೇಶದ ಪ್ರತಿಯನ್ನು ಪಡೆದ 15 ನಿಮಿಷಗಳಲ್ಲಿ ಬಿಡುಗಡೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಿರುವ ಜೈಲರ್.
**
ಏನಿದು ಪ್ರಕರಣ?
ಬೆಂಗಳೂರಿನ ಯು.ಬಿ.ಸಿಟಿಯ ಫರ್ಜಿ ಕೆಫೆಯಲ್ಲಿ ನಲಪಾಡ್ ಹಾಗೂ ಅವರ ಏಳು ಸಹಚರರು 2018ರ ಫೆಬ್ರುವರಿ 17ರಂದು ವಿದ್ವತ್ ಮೇಲೆ ಜಗ್, ಬಾಟಲಿ ಹಾಗೂ ಕಬ್ಬಿಣದ ರಿಂಗ್‌ಗಳಿಂದ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಫೆಬ್ರುವರಿ 19ರಂದು ನಲಪಾಡ್ ಅವರನ್ನು ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿರಿ
ನ್ಯಾಯಾಲಯ ಕಲಾಪದಲ್ಲಿನ ವಾದ–ಪ್ರತಿವಾದ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.