ಕಾರಿನಿಂದ ಕಸ ಬಿಸಾಡಿದ ವ್ಯಕ್ತಿಗೆ ರಸ್ತೆಯಲ್ಲೇ ಸ್ವಚ್ಛತೆಯ ಪಾಠ ಮಾಡಿದ ಅನುಷ್ಕಾ

7

ಕಾರಿನಿಂದ ಕಸ ಬಿಸಾಡಿದ ವ್ಯಕ್ತಿಗೆ ರಸ್ತೆಯಲ್ಲೇ ಸ್ವಚ್ಛತೆಯ ಪಾಠ ಮಾಡಿದ ಅನುಷ್ಕಾ

Published:
Updated:
ಅನುಷ್ಕಾ ಶರ್ಮಾ (ಸಂಗ್ರಹ ಚಿತ್ರ)

ಮುಂಬೈ: ಐಷಾರಾಮಿ ಕಾರಿನಲ್ಲಿ ಹೋಗುತ್ತ ರಸ್ತೆಯಲ್ಲಿ ಕಸ ಬಿಸಾಡಿದ ವ್ಯಕ್ತಿಯೊಬ್ಬರನ್ನು ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ತರಾಟೆಗೆ ತೆಗೆದುಕೊಂಡು ವಿಡಿಯೊ ಈಗ ವೈರಲ್‌ ಆಗಿದೆ.

ಕಸ ಬಿಸಾಡುತ್ತಿದ್ದ ವ್ಯಕ್ತಿಯನ್ನು ಗಮನಿಸಿದ ಅನುಷ್ಕಾ ತಮ್ಮ ಕಾರಿನ ಗಾಜು ಇಳಿಸಿ, ‘ರಸ್ತೆಯ ಮೇಲೇಕೆ ಕಸ ಬಿಸಾಡುತ್ತಿದ್ದೀರಿ?’ ಎಂದು ಖಾರವಾಗಿಯೇ ಪ್ರಶ್ನಿಸಿದ್ದಾರೆ.

‘ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ಪ್ಲಾಸ್ಟಿಕ್‌ ಎಸೆಯುವಂತಿಲ್ಲ. ದಯವಿಟ್ಟು ಕಾಳಜಿ ವಹಿಸಿ’ ಎಂದು ಸ್ವಚ್ಛತೆಯ ಪಾಠ ಮಾಡಿದ್ದಾರೆ.

ಈ ಸ್ವಚ್ಛತಾ ಪಾಠದ ಸನ್ನಿವೇಶವನ್ನು ಅನುಷ್ಕಾರ ಪತಿ ಹಾಗೂ ಕ್ರಿಕೆಟ್‌ ತಂಡದ ನಾಯಕರಾಗಿರುವ ವಿರಾಟ್‌ ಕೊಹ್ಲಿ ವಿಡಿಯೊ ಮಾಡಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ರಸ್ತೆಯಲ್ಲಿ ಈ ರೀತಿ ಕಸ ಹಾಕುವ ಜನರನ್ನು ಸರಿದಾರಿಗೆ ತರಬೇಕಿದೆ. ಐಷಾರಾಮಿ ಕಾರಿನಲ್ಲಿ ಹೋಗುತ್ತಿದ್ದರೂ ಸ್ವಚ್ಛತೆ ಬಗ್ಗೆ ತಲೆಯಲ್ಲಿ ತಿಳಿವಳಿಕೆ ಇಲ್ಲ. ಇಂತಹ ಸನ್ನಿವೇಶಗಳನ್ನು ನೀವೂ ಕಂಡರೇ, ಜನರನ್ನು ಎಚ್ಚರಿಸಿ ಸ್ವಚ್ಛತೆಯ ಅರಿವು ಮೂಡಿಸಿ’ ಎಂದು ವಿರಾಟ್‌ ಸಲಹೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry