ನವದೆಹಲಿ: ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ರಸ್ತೆ ಬದಿಯಲ್ಲಿ ಬಡದಂಪತಿಜತೆ ಕುಳಿತು ಊಟ ಮಾಡುತ್ತಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದೇ ಫೋಟೊ ಜತೆ ಸಂಬಿತ್ ಪಾತ್ರಾ ಚುನಾವಣಾ ಪ್ರಚಾರ ನಡೆಸುತ್ತಿರುವ ಇತರ ಫೋಟೊಗಳನ್ನೂ ಪೋಸ್ಟ್ ಮಾಡಿರುವ ಪತ್ರಕರ್ತ ನಿರಂಜನ್, ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರಾಮೋದಿಯವರ ಸುಳ್ಳನ್ನು ಬಹಿರಂಗ ಮಾಡಿದ್ದಾರೆ.ಎಲ್ಲರಿಗೂ ಮನೆ, ಉಜ್ವಲ್ ಗ್ಯಾಸ್, ಡಿಜಿಟಲ್ ಇಂಡಿಯಾ, ವಿದ್ಯುತ್ ಸಂಪರ್ಕ,2 ಕೋಟಿ ಉದ್ಯೋಗವಕಾಶ, ಸ್ವಚ್ಛ ಭಾರತ್, ಸ್ಮಾರ್ಟ್ ಸಿಟಿ...ಮೊದಲಾದವುಗಳು ಎಂದು ಟ್ವೀಟ್ ಮಾಡಿದ್ದರು.ಆಮೇಲೆ ಆ ಟ್ವೀಟ್ ಡಿಲೀಟ್ ಮಾಡಿದ್ದರು.ಡಿಲೀಟ್ ಮಾಡಿದ ಟ್ವೀಟ್ ಇಲ್ಲಿದೆ.

ರಾಜಕೀಯ ವಿಮರ್ಶಕಿಮತ್ತು ಲೇಖಕಿಆಗಿರುವ ಜೈನಾಬ್ ಸಿಖಂದರ್ ಅವರು ಕುಚ್ ಲೋಗೋಂಕಿ ಭೂಖ್ ಕಾ ಅಂತ್ ಹಿ ನಹೀ ಹೋತಾ (ಕೆಲವು ಜನರ ಹಸಿವು ಮುಗಿಯುವುದೇ ಇಲ್ಲ) ಎಂದು ಟ್ವೀಟ್ ಮಾಡಿದ್ದು, ಆಮೇಲೆ ಡಿಲೀಟ್ ಮಾಡಿದ್ದರು.

ಶಶಿಧರನ್ ಪಳೂರ್ ಎಂಬ ಟ್ವೀಟಿಗರೊಬ್ಬರು ಇದೇ ಫೋಟೊ ಶೇರ್ ಮಾಡಿ, ಸಂಬಿತ್ ಪಾತ್ರಾ ಅವರೇ, ನೀವು ತಿನ್ನುವುದರಲ್ಲೇ ಮಗ್ನರಾಗಿದ್ದೀರಾ.ನಿಮ್ಮ ಚುನಾವಣಾ ಪ್ರಚಾರದಲ್ಲಿ ನೀವು ಬೇರೇನೂ ಕೆಲಸ ಮಾಡುವುದನ್ನು ನೋಡಿಲ್ಲ ಎಂದು ಟ್ವೀಟಿಸಿದ್ದಾರೆ. ಈ ಟ್ವೀಟ್ ಕೂಡಾ ಈಗ ಡಿಲೀಟ್ ಆಗಿದೆ.

ಇದು ಫೋಟೊಶಾಪ್ ಮಾಡಿದ ಚಿತ್ರ
ಸಂಬಿತ್ ಪಾತ್ರಾ ಅವರ ಈ ಚಿತ್ರದ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದಆಲ್ಟ್ ನ್ಯೂಸ್ಇದು ಫೋಟೊಶಾಪ್ ಮಾಡಿದ ಚಿತ್ರ ಎಂದು ವರದಿ ಮಾಡಿದೆ.

ಸಂಬಿತ್ ಪಾತ್ರಾ ಬಡ ದಂಪತಿಯೊಂದಿಗೆ ಊಟ ಮಾಡುತ್ತಿರುವ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಇಂಥದ್ದೊಂದು ಫೋಟೊ ಪತ್ತೆಯಾಗಿಲ್ಲ. ಇದೇ ಚಿತ್ರವನ್ನು ಅಡ್ಡಡ್ಡವಾಗಿ ತಿರುಗಿಸಿ ಸರ್ಚ್ ಮಾಡಿದಾಗ 2016ರಲ್ಲಿ ಪ್ರಕಟವಾದ ಸುದ್ದಿಯಲ್ಲಿಈ ಚಿತ್ರ ಸಿಕ್ಕಿದೆ.

ಒಡಿಶಾದ ಪುರಿ ಲೋಕಸಭಾ ಕ್ಷೇತ್ರದಲ್ಲಿ ಸಂಬಿತ್ ಪಾತ್ರಾ ಸ್ಪರ್ಧಿಸುತ್ತಿದ್ದಾರೆ. ಚುನಾವಣಾ ಪ್ರಚಾರದ ಅಂಗವಾಗಿ ತಮ್ಮ ಚುನಾವಣಾ ಕ್ಷೇತ್ರಕ್ಕೆ ಭೇಟಿ ನೀಡಿದ ಹಲವಾರು ಫೋಟೊಗಳನ್ನು ಪಾತ್ರಾ ಟ್ವೀಟ್ ಮಾಡಿದ್ದರು.

ಇದರಲ್ಲಿ ಪಾತ್ರಾ ಊಟ ಮಾಡುತ್ತಿರುವ ಚಿತ್ರವೊಂದನ್ನು ಕತ್ತರಿಸಿ ರಸ್ತೆ ಬದಿಯಲ್ಲಿ ಅನ್ನ ತಯಾರು ಮಾಡುತ್ತಿರುವ ದಂಪತಿ ಚಿತ್ರದ ಜತೆಗೆ ಫೋಟೊಶಾಪ್ ಮಾಡಲಾಗಿದೆ. ಸಂಬಿತ್ ಪಾತ್ರಾ ಅವರ ಚಿತ್ರ ಫೋಟೊಶಾಪ್ ಮಾಡಿದ್ದು ಎಂದು ಬೂಮ್ ಲೈವ್ ಕೂಡಾ ವರದಿ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.