ಭಾರಿ ಮಳೆಯಿಂದಾಗಿ ರನ್ವೇ ಕಾಣದಿದ್ದರೂ, ವಿಮಾನವನ್ನು ಇಳಿಸಲು ಪೈಲಟ್ ಮುಂದಾಗುತ್ತಿರುವ, ವಿಮಾನದ ಕಾಕ್ಪಿಟ್ನ ಒಳಗೆ ಚಿತ್ರೀಕರಿಸಿರುವ ವಿಡಿಯೊ ತುಣುಕನ್ನು ಇನ್ಸ್ಟಾಗ್ರಾಂ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. ಇದು ಇತ್ತೀಚೆಗೆ ವಿಮಾನ ಅಪಘಾತದಲ್ಲಿ ನಿಧನರಾದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿದ್ದ ವಿಮಾನದ ದೃಶ್ಯ ಎಂದು ಪೋಸ್ಟ್ನಲ್ಲಿ ಪ್ರತಿಪಾದಿಸಲಾಗಿದೆ. ಆದರೆ, ಇದು ಸುಳ್ಳು.

ವಿಡಿಯೊ ತುಣುಕಿನ ಕೀ ಫ್ರೇಮ್ ಒಂದನ್ನು ಗೂಗಲ್ ಲೆನ್ಸ್ನಲ್ಲಿ ಹಾಕಿ ಹುಡುಕಿದಾಗ ಹಲವರು ಇದೇ ವಿಡಿಯೊವನ್ನು ಹಂಚಿರುವುದು ಕಂಡುಬಂತು. ಮತ್ತಷ್ಟು ಹುಡುಕಾಟ ನಡೆಸಿದಾಗ ಅಮೆರಿಕದ ಮಾಧ್ಯಮ ವೆಬ್ಸೈಟ್ ಸಿಎನ್ಇಟಿನಲ್ಲಿ ಪ್ರಕಟವಾದ ವರದಿಯೊಂದು ಸಿಕ್ಕಿತು. ಅದರಲ್ಲಿದ್ದ ಫೋಟೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೊದಿಂದ ಪ್ರತ್ಯೇಕಿಸಲಾದ ಕೀ ಫ್ರೇಮ್ ಅನ್ನು ಹೋಲುತ್ತಿತ್ತು. ಆ ವರದಿಯಲ್ಲಿ ಘಟನೆಯು 2013ರಲ್ಲಿ ನಡೆದಿದೆ ಎಂದು ಉಲ್ಲೇಖಿಸಲಾಗಿದೆ. ಸಿಎನ್ಇಟಿಯ ಯೂಟ್ಯೂಬ್ ಚಾನೆಲ್ನಲ್ಲಿ ಕೂಡ ಇದೇ ವಿಡಿಯೊ ಅಪ್ಲೋಡ್ ಮಾಡಲಾಗಿದೆ. ಹಳೆಯ ವಿಡಿಯೊವನ್ನು ಅಜಿತ್ ಪವಾರ್ ಅವರಿಗೆ ಸಂಬಂಧಿಸಿದ ವಿಡಿಯೊ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.