ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check|ಪ್ಯಾಂಟ್‌ನಲ್ಲೇ ಮೂತ್ರ ಮಾಡಿಕೊಂಡ ಕೇಜ್ರಿವಾಲ್‌;ಇದು ತಿರುಚಲಾದ ಚಿತ್ರ

Published 29 ಮಾರ್ಚ್ 2024, 0:02 IST
Last Updated 29 ಮಾರ್ಚ್ 2024, 0:02 IST
ಅಕ್ಷರ ಗಾತ್ರ

‘ಇ.ಡಿ ಬಂಧಿಸಿದ ತಕ್ಷಣ ಅರವಿಂದ ಕೇಜ್ರಿವಾಲ್‌ ಪ್ಯಾಂಟ್‌ನಲ್ಲೇ ಮೂತ್ರ ಮಾಡಿಕೊಂಡಿದ್ದಾರೆ’ ಎಂಬ ವಿವರ ಇರುವ ಪೋಸ್ಟ್‌ ಮತ್ತು ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದೆ. ಆದರೆ ಇದು ತಿರುಚಲಾದ ಚಿತ್ರ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೇಜ್ರಿವಾಲ್ ಅವರನ್ನು ಬಂಧಿಸಿದ್ದು ರಾತ್ರಿಯ ವೇಳೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿರುವ ಚಿತ್ರ ಬೆಳಗ್ಗಿನ ಹೊತ್ತು ತೆಗೆದದ್ದು. ಆ ಚಿತ್ರವನ್ನು ಗೂಗಲ್ ರಿವರ್ಸ್‌ ಸರ್ಚ್‌ನಲ್ಲಿ ಹುಡುಕಿದಾಗ, 2022ರ ಜೂನ್‌ 6ರಂದು ಅಹಮದಾಬ್‌ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕೇಜ್ರಿವಾಲ್‌ ಎಂದು ಸುದ್ದಿ ಸಂಸ್ಥೆಗಳು ಪ್ರಕಟಿಸಿದ ಚಿತ್ರ ಪತ್ತೆಯಾಯಿತು. ಆ ಚಿತ್ರವನ್ನೇ ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. 

Kejriwal original image
Kejriwal original image

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT