ವ್ಯಕ್ತಿಯೊಬ್ಬರನ್ನು ನೇಣಿಗೆ ಹಾಕುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದೆ. ಇಸ್ರೇಲ್ನೊಂದಿಗಿನ ಯುದ್ಧ ನಿಂತ ನಂತರ ಇರಾನ್ನಲ್ಲಿ 700ಕ್ಕೂ ಹೆಚ್ಚು ಯಹೂದಿಗಳನ್ನು (ದೇಶದಲ್ಲಿರುವ ಯಹೂದಿಗಳ ಪೈಕಿ 10ನೇ ಒಂದರಷ್ಟು ಮಂದಿ) ಬಂಧಿಸಿದ್ದು, ಮೊಸಾದ್ ಏಜೆಂಟ್ಗಳು ಎಂದು ಆರೋಪಿಸಿ, ಅವರನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಲಾಗುತ್ತಿದೆ ಎಂದು ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಅದು ಸುಳ್ಳು ಸುದ್ದಿ.

ವಿಡಿಯೊದ ಕೀಫ್ರೇಮ್ ಅನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ಗೆ ಒಳಪಡಿಸಿದಾಗ, ಅಲಿರೆಝಾ ಡೊನ್ಯಾಡಿಡೆ ಎನ್ನುವ ಯೂ ಟ್ಯೂಬ್ ವಾಹಿನಿನಲ್ಲಿ 2024ರ ಏ.16ರಂದು (ಇರಾನ್–ಪ್ಯಾಲಿಸ್ಟೀನ್ ಸಂಘರ್ಷಕ್ಕೂ ಹಿಂದೆಯೇ) ಅಪ್ಲೋಡ್ ಮಾಡಲಾಗಿದ್ದ ಮೂಲ ವಿಡಿಯೊ ಕಂಡಿತು. ‘ಬೀ ಬಡಾನ್’ ಎನ್ನುವ ಸಿನಿಮಾ ಚಿತ್ರೀಕರಣದ ದೃಶ್ಯವನ್ನು ಅಲಿರೆಝಾ ಎನ್ನುವ ಸ್ಟಂಟ್ಮ್ಯಾನ್ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿದ್ದರು. ಆನ್ಲೈನ್ನಲ್ಲಿ ಲಭ್ಯವಿರುವ ಚಿತ್ರದಲ್ಲಿಯೂ ಈ ದೃಶ್ಯವನ್ನು ಕಾಣಬಹುದಾಗಿದೆ. ಸಿನಿಮಾವೊಂದರ ತುಣುಕನ್ನು ಹಂಚಿಕೊಂಡು ಕೆಲವರು ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.