ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Fact Check | ಹಾಥರಸ್‌ ಕಾಲ್ತುಳಿತ: ಮಥುರಾ ವಿಡಿಯೊ ಹಂಚಿಕೆ

Published 7 ಜುಲೈ 2024, 22:37 IST
Last Updated 7 ಜುಲೈ 2024, 22:37 IST
ಅಕ್ಷರ ಗಾತ್ರ

ಉತ್ತರ ಪ್ರದೇಶದ ಹಾಥರಸ್‌ ಜಿಲ್ಲೆಯಲ್ಲಿ 121 ಜನರ ಸಾವಿಗೆ ಕಾರಣವಾದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ವಿಡಿಯೊ ತುಣುಕುಗಳನ್ನು ಜನರು ಸಾಮಾಜಿಕ ಜಾಲತಾಣಗಳಲ್ಲಿನ ಹಂಚಿಕೊಳ್ಳುತ್ತಿದ್ದಾರೆ. ಭಾರಿ ಸಂಖ್ಯೆಯಲ್ಲಿ ಸೇರಿರುವ ಜನರು ಒತ್ತೊತ್ತಾಗಿ ನಿಂತುಕೊಂಡು ಪರಸ್ಪರ ತಳ್ಳಿಕೊಂಡು ಮುಂದಕ್ಕೆ ಹೋಗುತ್ತಿರುವ ವಿಡಿಯೊ ದೃಶ್ಯಾವಳಿಗಳನ್ನು ಹಂಚಿಕೊಂಡು, ಹಾಥರಸ್‌ನಲ್ಲಿ ನಡೆದ ಘಟನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಜುಲೈ 2ರಂದು ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಈ ವಿಡಿಯೊವನ್ನು ಹಂಚಿಕೊಂಡಿದ್ದರು. ಆದರೆ, ಈ ವಿಡಿಯೊ ಹಾಥರಸ್‌ ಕಾಲ್ತುಳಿತದ್ದಲ್ಲ.

ವಿಡಿಯೊದ ಮೂಲ ಪತ್ತೆಹಚ್ಚುವುದಕ್ಕಾಗಿ ಇನ್‌ವಿಡ್‌ ಟೂಲ್‌ ‍ಬಳಸಿಕೊಂಡು ಶೋಧನಡೆಸಿದಾಗ, ಹಲವು ಪ್ರಮುಖ ಫ್ರೇಮ್‌ಗಳು ಕಂಡು ಬಂದವು. ಒಂದು ಫ್ರೇಮ್‌ ಅನ್ನು ಗೂಗಲ್‌ ಲೆನ್ಸ್‌ನಲ್ಲಿ ಹಾಕಿ ಹುಡುಕಿದಾಗ, ಇದೇ ರೀತಿಯ ಮಾಹಿತಿ ನೀಡುವ ಹಲವು ವಿಡಿಯೊಗಳು ಕಂಡು ಬಂದವು. ಮತ್ತಷ್ಟು ಶೋಧಕ್ಕೆ ಒಳಪಡಿಸಿದಾಗ, ಎನ್‌ಡಿಟಿವಿ ಯುಟ್ಯೂಬ್‌ ಚಾನೆಲ್‌ನಲ್ಲಿ ಮಾರ್ಚ್‌ 17ರಂದು ಅಪ್‌ಲೋಡ್‌ ಮಾಡಿದ ವಿಡಿಯೊ ಸಿಕ್ಕಿತು. ಅದು ಮಥುರಾದಲ್ಲಿ ಹೋಳಿಗೂ ಮುನ್ನ ನಡೆದಿದ್ದ ಸಮಾರಂಭದಲ್ಲಿ ನಡೆದ ಕಾಲ್ತುಳಿತದ ಪ್ರಕರಣದ ವಿಡಿಯೊವಾಗಿತ್ತು. ಹಾಗಾಗಿ, ಹಾಥರಸ್‌ನಲ್ಲಿ ನಡೆದಿರುವುದು ಎಂದು ಹೇಳಿಕೊಂಡ ವಿಡಿಯೊ ತುಣುಕುಗಳು ಅಲ್ಲಿಯದ್ದಲ್ಲ. ಮಥುರಾದಲ್ಲಿ ನಡೆದಿದ್ದ ಕಾಲ್ತುಳಿತದ್ದು ಎಂದು ಪಿಟಿಐ ಫ್ಯಾಕ್ಟ್‌ಚೆಕ್‌ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT