ನಟರಾಜ ಹಾಗೂ ಅಪ್ಸರ ಬ್ರ್ಯಾಂಡ್‌ನ ಪೆನ್ಸಿಲ್ ಪ್ಯಾಕೇಜಿಂಗ್ ಉದ್ಯೋಗಕ್ಕೆ ಸಂಬಂಧಪಟ್ಟ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ನಟರಾಜ ಪೆನ್ಸಿಲ್ ಪ್ಯಾಕಿಂಗ್ ಕೆಲಸವನ್ನು ಮನೆಯಲ್ಲೇ ಕುಳಿತು ಮಾಡಬಹುದು. ತಿಂಗಳಿಗೆ ₹35,000 ವೇತನ ಸಿಗುತ್ತದೆ’ ಎಂಬುದಾಗಿ ಜಾಹೀರಾತು ತರಹದ ಪೋಸ್ಟ್‌ಗಳಲ್ಲಿ ಹೇಳಲಾಗಿದೆ. ಪೆನ್ಸಿಲ್‌ಗಳನ್ನು ಪ್ರತ್ಯೇಕ ಪೊಟ್ಟಣಗಳಲ್ಲಿ ಇರಿಸಿ ಪ್ಯಾಕ್ ಮಾಡಿ, ಮಾರಾಟಕ್ಕೆ ಸಜ್ಜುಗೊಳಿಸಬೇಕು. ಈ ಕೆಲಸ ಮಾಡುವುದು ಸುಲಭ ಎಂಬುದಾಗಿ ಕೆಲಸದ ಸ್ವರೂಪವನ್ನು ವಿವರಿಸಲಾಗಿದೆ. ಈ ಕೆಲಸ ಪಡೆಯಬೇಕಾದರೆ, ಮುಂಗಡವಾಗಿ ₹10,000 ಪಾವತಿಸಬೇಕು ಎಂದು ಸೂಚಿಸಲಾಗಿದೆ. ಆದರೆ ಇದೊಂದು ಮೋಸದ ಜಾಲ.

ನಟರಾಜ ಹಾಗೂ ಅಪ್ಸರ ಪೆನ್ಸಿಲ್ ಬ್ರ್ಯಾಂಡ್‌ಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶ ವಂಚನೆಯ ಉದ್ದೇಶದಿಂದ ಕೂಡಿದೆ ಎಂದು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ. ಕೆಲಸದ ಆಮಿಷ ತೋರಿಸಿ, ಹಣ ವಸೂಲಿ ಮಾಡುವ ಇಂತಹ ಮೋಸದ ಜಾಲಗಳನ್ನು ನಂಬಬೇಡಿ ಎಂದು ಎಚ್ಚರಿಕೆ ನೀಡಲಾಗಿದೆ. ‘ಪೆನ್ಸಿಲ್ ಪ್ಯಾಕೇಜಿಂಗ್ ಕೆಲಸವು ಯಂತ್ರಗಳ ಮೂಲಕ ಸ್ವಯಂಚಾಲಿತವಾಗಿ ಆಗುತ್ತದೆ. ಇದನ್ನು ಕೈಯಿಂದ ಮಾಡಲಾಗುವುದಿಲ್ಲ. ಮನೆಯಲ್ಲಿ ಕುಳಿತು ಮಾಡುವಂತಹದ್ದೂ ಅಲ್ಲ’ ಎಂದು ತಿಳಿಸಿರುವ ಸಂಸ್ಥೆಯು, ಇದಕ್ಕೆ ಸಂಬಂಧಿಸಿದ ವಿಡಿಯೊವೊಂದನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.