ಸಾಮಾಜಿಕ ಜಾಲತಾಣದ ಹಲವು ಬಳಕೆದಾರರು ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ಅವರ ವಿಡಿಯೊ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಬಂದಿದ್ದ ಬಿಲ್ ಗೇಟ್ಸ್ ಅವರು, ಕಾಶಿ ವಿಶ್ವನಾಥ ದೇವಾಲಯಕ್ಕೂ ಭೇಟಿ ನೀಡಿದ್ದರು ಎಂದು ವಿಡಿಯೊ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಅದು ಸುಳ್ಳು. ವಿಡಿಯೊದಲ್ಲಿ ಇರುವ ವ್ಯಕ್ತಿ ಬಿಲ್ ಗೇಟ್ಸ್ ಅಲ್ಲ.

ವಿಡಿಯೊ ಅನ್ನು ಹಲವು ಕೀಫ್ರೇಮ್ಗಳಾಗಿ ವಿಂಗಡಿಸಿದಾಗ, ಇದೇ ವಿಡಿಯೊ ಅನ್ನು 2024ರ ಡಿಸೆಂಬರ್ 24ರಂದು ಯೂ ಟ್ಯೂಬ್ಗೆ ಅಪ್ಲೋಡ್ ಮಾಡಿರುವುದು ಕಂಡುಬಂತು. ‘ಬಿಲ್ ಗೇಟ್ಸ್ ಅವರ ರೀತಿಯೇ ಕಾಣುತ್ತಿರುವ ವ್ಯಕ್ತಿ’ ಎಂದು ವಿಡಿಯೋಗೆ ಅಡಿಬರಹ ನೀಡಲಾಗಿದೆ. ಮಹಾಕುಂಭ ಮೇಳವು ಆರಂಭವಾಗಿದ್ದು 2025ರ ಜನವರಿ 13ರಂದು. ವಿಡಿಯೊದಲ್ಲಿ ಇರುವ ವ್ಯಕ್ತಿಯ ಚಿತ್ರವನ್ನು ಝೂಮ್ ಮಾಡಿ, ಅದನ್ನು ಬಿಲ್ ಗೇಟ್ಸ್ ಚಿತ್ರದೊಂದಿಗೆ ಹೋಲಿಸಿ ನೋಡಿದಾಗ, ಎರಡೂ ಬೇರೆ ಬೇರೆ ವ್ಯಕ್ತಿಗಳ ಚಿತ್ರಗಳು ಎನ್ನುವುದು ಕಂಡುಬಂತು. ಈ ವಿಚಾರದಲ್ಲಿ ಮತ್ತಷ್ಟು ಸ್ಪಷ್ಟತೆ ಪಡೆಯಲು ಬಿಲ್ ಗೇಟ್ಸ್ ಫೌಂಡೇಷನ್ ಅನ್ನು ಸಂಪರ್ಕಿಸಿದಾಗ, ಗೇಟ್ಸ್ ಅವರು ಭಾರತಕ್ಕೆ ಬಂದಿಲ್ಲ ಎಂದೂ ಅವರು ಮಹಾಕುಂಭ ಮೇಳದಲ್ಲಿ ಭಾಗವಹಿಸುತ್ತಿಲ್ಲ ಎಂದೂ ತಿಳಿಸಿದರು. ಈ ಬಗ್ಗೆ ಬೂಮ್ ಫ್ಯಾಕ್ಟ್ ಚೆಕ್ ವರದಿ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.