ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್ ಚೆಕ್: ಬಂಗಾಳದಲ್ಲಿ ಆರ್‌ಎಸ್‌ಎಸ್‌ನ 125 ಶಾಲೆ ಬಂದ್?

Last Updated 6 ಮೇ 2021, 19:30 IST
ಅಕ್ಷರ ಗಾತ್ರ

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರು ತಮಗೆ ತೀವ್ರ ಪ್ರತಿಸ್ಪರ್ಧೆ ಒಡ್ಡಿದ್ದ ಬಿಜೆಪಿಯನ್ನು ಭಾರಿ ಅಂತರದಿಂದ ಸೋಲಿಸಿದ್ದಾರೆ. ಗೆದ್ದ ಬಳಿಕ ದೀದಿ ಅವರು ಆರ್‌ಎಸ್‌ಎಸ್‌ಗೆ ಸಂಬಂಧಿಸಿದ 125 ಶಾಲೆಗಳನ್ನು ಮುಚ್ಚಲು ಆದೇಶ ನೀಡಿದ್ಧಾರೆ. ಈ ಸುದ್ದಿ ರಿಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗಿದ್ದು, ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಷೇರ್ ಆಗುತ್ತಿವೆ. ಟ್ವಿಟರ್‌ ಹಾಗೂ ಫೇಸ್‌ಬುಕ್‌ನಲ್ಲಿ ಮಮತಾ ನಡೆಯನ್ನು ಖಂಡಿಸಲಾಗಿದೆ.

ಶಾಲೆಗಳ ವಿರುದ್ಧ ಮಮತಾ ಅವರು ಕ್ರಮ ತೆಗೆದುಕೊಂಡ ಸುದ್ದಿ ಮೂರು ವರ್ಷ ಹಳೆಯದ್ದು ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ. ಪಠ್ಯಕ್ರಮ ಅನುಸರಿಸದ ಹಾಗೂ ಎನ್‌ಒಸಿ ಪಡೆದ ಕಾರಣ ರಾಜ್ಯದ 493 ಶಾಲೆಗಳ ವಿರುದ್ಧ ಕ್ರಮಕ್ಕೆ ಸರ್ಕಾರ ಆದೇಶಿಸಿತ್ತು. ಈ ಪೈಕಿ ಆರ್‌ಎಸ್‌ಎಸ್‌ನ 125 ಶಾಲೆಗಳು ಸೇರಿದ್ದವು. ರಾಜ್ಯದ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರು 2018ರ ಫೆಬ್ರುವರಿ 20ರಂದು ಸದನಕ್ಕೆ ಈ ಮಾಹಿತಿ ತಿಳಿಸಿದ್ದರು ಎಂದು ವಿವಿಧ ಪತ್ರಿಕೆಗಳು ಅಂದು ವರದಿ ಮಾಡಿದ್ದವು. ಆಗ ನೀಡಿದ್ದ ಆದೇಶ ಈಗಿನದ್ದು ಎಂಬುದಾಗಿ ವೈರಲ್ ಆಗಿದೆ ಎಂದು ವೆಬ್‌ಸೈಟ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT