ಸೂಟ್‌ಕೇಸ್‌ನಲ್ಲಿ ತುಂಬಿಸಲಾಗಿದ್ದ ಮಹಿಳೆಯ ಶವವೊಂದು ಗುರುಗ್ರಾಮ ಸಮೀಪದ ಪೊದೆಯಲ್ಲಿ ಇತ್ತೀಚೆಗೆ ಪತ್ತೆಯಾಗಿತ್ತು. ಪೊಲೀಸರು ಇದನ್ನು ಪರಿಶೀಲಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮೃತ ಮಹಿಳೆಯು ‘ಲವ್ ಜಿಹಾದ್’ ಸಂತ್ರಸ್ತೆಯಾಗಿದ್ದಾಳೆ ಎಂಬುದಾಗಿ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಗಾಜಿಯಾಬಾದ್ ಜಿಲ್ಲಾ ಬಿಜೆಪಿ ಘಟಕದ ಸಾಮಾಜಿಕ ಜಾಲತಾಣ ಮುಖ್ಯಸ್ಥ ಎಂದು ಹೇಳಿಕೊಂಡಿರುವ ಆನಂದ್ ಕರ್ಲಾ ಎಂಬುವರು ಲವ್ ಜಿಹಾದ್ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಲವ್ ಜಿಹಾದ್‌ಗೂ, ಈ ಪ್ರಕರಣಕ್ಕೂ ಸಂಬಂಧವಿಲ್ಲ.

ಪ್ರಮುಖ ಪತ್ರಿಕೆಗಳು ಸೂಟ್‌ಕೇಸ್ ಪತ್ತೆ ಕುರಿತು ಪ್ರಕಟಿಸಿದ ವರದಿಗಳುಹಾಗೂ ಡಿಸಿಪಿ ಹೇಳಿಕೆಯಲ್ಲಿ ಲವ್ ಜಿಹಾದ್‌ನ ಉಲ್ಲೇಖವಿಲ್ಲ ಎಂದು ‘ದಿ ವೈರ್’ ತಾಣ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.ಮೃತಪಟ್ಟಿರುವ ಮಹಿಳೆಯನ್ನು ಪ್ರಿಯಾಂಕಾ ಎಂದು ಗುರುತಿಸಲಾಗಿದೆ. ಪೊಲೀಸ್ ಎಫ್‌ಐಆರ್‌ನಲ್ಲಿ ಆರೋಪಿಯನ್ನು ರಾಹುಲ್ ಎಂದು ಉಲ್ಲೇಖಿಸಲಾಗಿದೆ. ಇಬ್ಬರೂ ಒಂದೇ ಧರ್ಮಕ್ಕೆ ಸೇರಿದವರಾಗಿದ್ದಾರೆ. ಇದು ಲವ್ ಜಿಹಾದ್‌ಗೆ ಸಂಬಂಧಿಸಿದ ಪ್ರಕರಣವಲ್ಲ ಎಂದು ಠಾಣಾಧಿಕಾರಿ ಹರೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.