ಸೆಪ್ಟೆಂಬರ್ 27ರಂದು ಸಂಯುಕ್ತ ಕಿಸಾನ್ ಮೋರ್ಚಾವು ಭಾರತ್ ಬಂದ್ ನಡೆಸಿತು. ಬಂದ್‌ಗೆ ವಿರೋಧ ವ್ಯಕ್ತಪಡಿಸಿರುವ ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ನಗರದಲ್ಲಿ ಬಂದ್ ನಡೆದಿಲ್ಲ ಎಂದು ಬಿಂಬಿಸಲು ಜನನಿಬಿಡ ರಸ್ತೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಬೆಂಗಳೂರು, ದೆಹಲಿ, ಸೂರತ್, ಕೊಹಿಮಾ.. ಹೀಗೆ ಹಲವು ನಗರಗಳ ಜನ ಈ ಯತ್ನ ಮಾಡಿದ್ದಾರೆ. ಆದರೆ ಎಲ್ಲರೂ ಒಂದೇ ಚಿತ್ರವನ್ನು ಬಳಸಿರುವುದು ವಿಚಿತ್ರ. ಬಂದ್ ಪರವಾಗಿರುವವರು ಇದನ್ನು ಗೇಲಿ ಮಾಡಿದ್ದಾರೆ. ‘ಒಂದು ದೇಶ, ಒಂದು ನಗರ’ ಕಲ್ಪನೆ ಸಾಕಾರವಾಗಿದೆ ಎಂದು ಚುಚ್ಚಿದ್ದಾರೆ.

ಸಾಮಾಜಿಕ ಜಾಲತಾಣಲ್ಲಿ ವೈರಲ್ ಆಗಿರುವ ಚಿತ್ರವು ಬಿಹಾರದ ಪಟ್ನಾ ನಗರದ್ದು. 2016ರಲ್ಲಿ ‘ಪಟ್ನಾ ಬೀಟ್ಸ್’ ಎಂಬ ಸುದ್ದಿತಾಣವು ಮೊದಲಿಗೆ ಈ ಚಿತ್ರವನ್ನು ಪ್ರಕಟಿಸಿತ್ತು. ಪಟ್ನಾದಲ್ಲಿ ಸಮ–ಬೆಸ ವಾಹನ ಸಂಚಾರದ ಕುರಿತು ಪ್ರಕಟಿಸಿದ್ದ ಸುದ್ದಿಗೆ ಈ ಚಿತ್ರ ಬಳಸಿಕೊಂಡಿತ್ತು. ನಂತರ ಖಬರ್ ಇಂಡಿಯಾ, ದೈನಿಕ್ ಭಾಸ್ಕರ್ ಪತ್ರಿಕೆಗಳೂ ಪ್ರಕಟಿಸಿವೆ ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ತಿಳಿಸಿದ್ದು, ಭಾರತ್ ಬಂದ್‌ಗೂ ಈ ಚಿತ್ರಕ್ಕೂ ಸಂಬಂಧವಿಲ್ಲ ಎಂದು ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.