ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ಇನ್ನು ಮುಂದೆ ವಾರಕ್ಕೆ ಮೂರು ದಿನ ರಜೆ ಎನ್ನುವುದು ಸುಳ್ಳು ಸುದ್ದಿ

Fact Check
Published 15 ಡಿಸೆಂಬರ್ 2023, 4:13 IST
Last Updated 15 ಡಿಸೆಂಬರ್ 2023, 4:13 IST
ಅಕ್ಷರ ಗಾತ್ರ

‘ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2024ರ ಫೆ.1ರಂದು ಕೇಂದ್ರ ಬಜೆಟ್‌ ಅನ್ನು ಮಂಡಿಸಲಿದ್ದಾರೆ. ಈ ಬಜೆಟ್‌ನಲ್ಲಿ ಕಂಪನಿಗಳಲ್ಲಿ ಕೆಲಸದ ಅವಧಿ, ರಜೆ ಹಾಗೂ ಸಂಬಳಗಳು ಬದಲಾಗಬಹುದು. ಜುಲೈ 1ರಿಂದ ಕಂಪನಿಗಳು ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಿಸಲಿದೆ. ಉದ್ಯೋಗಿಗಳು ದಿನದಲ್ಲಿ 10–12 ತಾಸುಗಳಂತೆ ವಾರದ ನಾಲ್ಕು ದಿನ ಕೆಲಸ ಮಾಡಬೇಕಾಗಬಹುದು. ಕಂಪನಿಗಳು, ಉದ್ಯೋಗಿಗಳಿಗೆ ವಾರದಲ್ಲಿ ಮೂರು ದಿನ ರಜೆ ನೀಡಲಿವೆ...’ ಎಂಬಂಥ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಇದು ಸುಳ್ಳು ಸುದ್ದಿ.

ಪೋಸ್ಟ್‌ನಲ್ಲಿ ಪ್ರಸ್ತಾಪಿಸಲಾದ ವಿಷಯಗಳ ಕುರಿತು ವಿಸ್ತೃತ ಹುಡುಕಾಟ ನಡೆಸಲಾಯಿತು. ಈ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಗೊಂಡ ವರದಿಗಳನ್ನು ಹುಡುಕಲಾಯಿತು. ಆದರೆ, ವಾರದ ರಜೆಯ ದಿನಗಳ ಹೆಚ್ಚಳದ ಕುರಿತು ಯಾವ ಪತ್ರಿಕೆಯಲ್ಲೂ ವರದಿ ಕಾಣಲಿಲ್ಲ. ಕೊನೆಯದಾಗಿ ಕೇಂದ್ರ ಹಣಕಾಸು ಸಚಿವಾಲಯವನ್ನೇ ಕೇಳಲಾಯಿತು. ಈ ರೀತಿಯ ಯಾವುದೇ ಪ್ರಸ್ತಾವವು ಸರ್ಕಾರದ ಮುಂದಿಲ್ಲ. ಇದು ಸುಳ್ಳು ಸುದ್ದಿ ಎಂದು ಸಚಿವಾಲಯವು ಉತ್ತರಿಸಿತು ಎಂದು ಬೂಮ್‌ಲೈವ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT