ಬೆಂಗಳೂರು: ಹಿಜಾಬ್ ನಿಷೇಧ ವಿರೋಧಿಸಿ ಬುರ್ಖಾ ಧರಿಸಿ ಪ್ರತಿಭಟನೆ ನಡೆಸುತ್ತಿದ್ದ ದ್ದ ಮಹಿಳೆಯರ ಮೇಲೆ ಕರ್ನಾಟಕ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ನಕಲಿ ಎಂದು ಕರ್ನಾಟಕ ಪೊಲೀಸ್ ಫ್ಯಾಕ್ಟ್ ಚೆಕ್ ಮೂಲಕ ತಿಳಿಸಿದೆ.

ಬುರ್ಖಾ ಧರಿಸಿದ ಮಹಿಳಾ ಚಳವಳಿಗಾರರ ಗುಂಪನ್ನು ಪೊಲೀಸರು ಥಳಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಿಜಾಬ್ ನಿಷೇಧದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮುಸ್ಲಿಂ ಮಹಿಳೆಯರನ್ನು ಕರ್ನಾಟಕ ಪೊಲೀಸರು ಹೊಡೆದಿದ್ದಾರೆ ಎಂದು ಬಿಂಬಿಸಲಾಗಿದೆ.

ತರಗತಿಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸುವ ಕುರಿತಂತೆ ಪರ ಮತ್ತು ವಿರೋಧಿ ಪ್ರತಿಭಟನೆಗಳ ನಡುವೆ ಈ ವಿಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ಪೊಲೀಸ್ ಪರಿಶೀಲನೆಯ ಪ್ರಕಾರ, ಈಗ ಹರಿದಾಡುತ್ತಿರುವ ವಿಡಿಯೊವು ವಾಸ್ತವವಾಗಿ ಸೆಪ್ಟೆಂಬರ್ 2021 ರಲ್ಲಿ ಬೆಂಗಳೂರಿನಲ್ಲಿ‘ಹೊಸ ಶಿಕ್ಷಣ ನೀತಿ’ ಅನುಷ್ಠಾನದ ವಿರುದ್ಧ ಕೆಲವು ವಿದ್ಯಾರ್ಥಿಗಳು ಪ್ರತಿಭಟಿಸಿದ್ದ ಸಂದರ್ಭ ಚಿತ್ರೀಕರಿಸಿದ ವಿಡಿಯೋ ಆಗಿದೆ. ‘ರಸ್ತಾ ರೋಕೊ’ನಡೆಸಲು ಯತ್ನಿಸಿ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ ಕಾರಣ, ಪೊಲೀಸರು ಬಲವಂತವಾಗಿ ಅವರನ್ನು ರಸ್ತೆಯಿಂದ ಹೊರಗೆ ಕಳುಹಿಸಿ ಸಂಚಾರಕ್ಕೆ ಮುಕ್ತಗೊಳಿಸಿದ್ದರು.

ಆದರೆ, ಹಿಜಾಬ್‌ಗೆ ಸಂಬಂಧಿಸಿದ ಪ್ರಸ್ತುತ ವಿವಾದಕ್ಕೆ ಮತ್ತು ಹರಿದಾಡುತ್ತಿರುವ ವಿಡಿಯೊಗೆ ಯಾವುದೇ ಸಂಬಂಧ ಇಲ್ಲ. ಕರ್ನಾಟಕ ಪೊಲೀಸರ ಪ್ರತಿಷ್ಠೆಗೆ ಕಳಂಕ ತರಲು ಉದ್ದೇಶಪೂರ್ವಕವಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಇಂತಹ ಪರಿಶೀಲಿಸದ ವಿಡಿಯೊಗಳನ್ನು ನಂಬಬೇಡಿ ಅಥವಾ ಹಂಚಿಕೊಳ್ಳಬೇಡಿ ಎಂದು ಜನರಿಗೆ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.