ಅಶಾಂತಿ ಪೀಡಿತ ಬಾಂಗ್ಲಾದೇಶದಲ್ಲಿ ವಿಷ್ಣುವಿನ ಪ್ರತಿಮೆಯನ್ನು ಧ್ವಂಸ ಮಾಡಲಾಗಿದೆ ಎಂದು ಪ್ರತಿಪಾದಿಸುತ್ತಾ ‘ಎಕ್ಸ್’ ಬಳಕೆದಾರರೊಬ್ಬರು, ವಿಷ್ಣುವಿನ ಬೃಹತ್ ವಿಗ್ರಹವನ್ನು ಎಕ್ಸ್ಕವೇಟರ್ ಮೂಲಕ ತೆರವುಗೊಳಿಸುತ್ತಿರುವ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಆದರೆ, ಇದು ಸುಳ್ಳು.

ಫೋಟೊವನ್ನು ರಿವರ್ಸ್ ಇಮೇಜ್ ಸರ್ಚ್ ವಿಧಾನದಲ್ಲಿ ಗೂಗಲ್ನಲ್ಲಿ ಹುಡುಕಿದಾಗ ದಿ ವೀಕ್ ಮತ್ತು ದ ಸ್ಟ್ರೈಟ್ಸ್ ಟೈಮ್ಸ್ನಲ್ಲಿ 2025ರ ಡಿಸೆಂಬರ್ನಲ್ಲಿ ಇದೇ ಫೋಟೊ ಸಹಿತ ವರದಿ ಪ್ರಕಟವಾಗಿದ್ದು ಕಂಡು ಬಂತು. ಈ ಘಟನೆಯು ಥಾಯ್ಲೆಂಡ್ ಮತ್ತು ಕಾಂಬೋಡಿಯಾ ಗಡಿಯಲ್ಲಿ ನಡೆದಿದೆ ಎಂದು ವರದಿಗಳಲ್ಲಿ ಹೇಳಲಾಗಿತ್ತು. ದ ಸ್ಟ್ರೈಟ್ಸ್ ಟೈಮ್ಸ್ ವರದಿ ಪ್ರಕಾರ, ಕಾಂಬೋಡಿಯಾಕ್ಕೆ ಸೇರಿದ ಜಾಗದಲ್ಲಿ 2014ರಲ್ಲಿ ವಿಷ್ಣುವಿನ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಥಾಯ್ಲೆಂಡ್ ಸೇನೆಯು 2025ರ ಡಿಸೆಂಬರ್ 22ರಂದು ಅದನ್ನು ತೆರವುಗೊಳಿಸಿದೆ. ಎರಡೂ ರಾಷ್ಟ್ರಗಳ ನಡುವೆ ಗಡಿ ಬಿಕ್ಕಟ್ಟು ತೀವ್ರವಾಗಿರುವ ಈ ಸಂದರ್ಭದಲ್ಲಿ ಭದ್ರತಾ ದೃಷ್ಟಿಯಿಂದ ಪ್ರತಿಮೆಯನ್ನು ತೆರವುಗೊಳಿಸಲಾಗಿದೆ ಎಂದು ಸರ್ಕಾರ ಹೇಳಿರುವುದಾಗಿ ಬ್ಯಾಂಕಾಕ್ ಪೋಸ್ಟ್ ವರದಿ ಮಾಡಿದೆ. ಡಿಸೆಂಬರ್ 24ರಂದು ಭಾರತವು ಈ ಕ್ರಮವನ್ನು ಖಂಡಿಸಿತ್ತು. ವಿದೇಶಾಂಗ ಇಲಾಖೆ ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿತ್ತು. ಥಾಯ್ಲೆಂಡ್–ಕಾಂಬೋಡಿಯಾ ಗಡಿಯಲ್ಲಿ ನಡೆದ ಘಟನೆಯನ್ನು ಬಾಂಗ್ಲಾದೇಶದಲ್ಲಿ ನಡೆದಿದ್ದು ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಬೂಮ್ ಫ್ಯಾಕ್ಟ್ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.