ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ಪಶ್ಚಿಮ ಬಂಗಾಳದಲ್ಲಿ ಅತ್ಯಂತ ಶಕ್ತಿಶಾಲಿ ಆರೋಗ್ಯ ವ್ಯವಸ್ಥೆ ಇದೆಯೇ?

Last Updated 11 ಮೇ 2021, 19:45 IST
ಅಕ್ಷರ ಗಾತ್ರ

‘ಪಶ್ಚಿಮ ಬಂಗಾಳದಲ್ಲಿ ಅತ್ಯಂತ ಶಕ್ತಿಶಾಲಿ ಆರೋಗ್ಯ ವ್ಯವಸ್ಥೆ ಇದೆ. ಮೇ 1ರಂದು ಮುರಿದ ಕಾಲಿನೊಂದಿಗೆ ಗಾಲಿಕುರ್ಚಿಯಲ್ಲಿ ಕುಳಿತಿದ್ದ ಮಮತಾ ಬ್ಯಾನರ್ಜಿ ಅವರು, ಮೇ 2ರಂದು ಚುನಾವಣೆಯಲ್ಲಿ ಗೆದ್ದ ನಂತರ ನಡೆದಾಡುತ್ತಿದ್ದಾರೆ. ಇಲ್ಲಿನ ಆರೋಗ್ಯ ವ್ಯವಸ್ಥೆ ಅಷ್ಟು ಅತ್ಯುತ್ತಮವಾಗಿದೆ’ ಎಂಬ ವಿವರ ಮತ್ತು ಚಿತ್ರ ಇರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಪೋಸ್ಟ್‌ ಜತೆ ಬಳಸಿಕೊಂಡಿರುವ ಮೊದಲ ಚಿತ್ರವು, ಮೇ 1ರಂದು ತೆಗೆದ ಚಿತ್ರವಲ್ಲ. ನಂದಿಗ್ರಾಮದಲ್ಲಿ ಗಾಯಗೊಂಡ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಮಾರ್ಚ್ 10ರಂದು ಮಮತಾ ಬ್ಯಾನರ್ಜಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದರು. ಮಾರ್ಚ್ 14ರಂದು ಅವರು ರೋಡ್‌ಶೋ ನಡೆಸಿದ್ದರು. ಅಂದು ತೆಗೆಯಲಾಗಿದ್ದ ಚಿತ್ರವನ್ನು, ಈ ಸುಳ್ಳುಸುದ್ದಿಯಲ್ಲಿ ಮೇ 1ರಂದು ತೆಗೆಯಲಾದ ಚಿತ್ರ ಬರೆಯಲಾಗಿದೆ. ಎರಡನೇ ಚಿತ್ರವನ್ನು 2019ರ ನವೆಂಬರ್ 28ರಂದು ತೆಗೆಯಲಾಗಿತ್ತು. ಅದನ್ನು 2021ರ ಮೇ 2ರಂದು ತೆಗೆಯಲಾದ ಚಿತ್ರ ಎಂದು ತಪ್ಪಾಗಿ ಬರೆಯಲಾಗಿದೆ ಎಂದು ಆಲ್ಟ್‌ನ್ಯೂಸ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT