ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾನ್ ಅಪ್‌ಡೇಟ್‌ ಮಾಡದ ಖಾತೆ ನಿರ್ಬಂಧಿಸುವುದಾಗಿ India Payment Bank ಹೇಳಿಲ್ಲ

Published 21 ಡಿಸೆಂಬರ್ 2023, 23:30 IST
Last Updated 21 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಕೆವೈಸಿ ಅಪ್‌ಡೇಟ್ ಮಾಡದಿದ್ದರೆ ಬ್ಯಾಂಕ್ ಖಾತೆಗಳನ್ನು ತಕ್ಷಣವೇ ಬ್ಲಾಕ್ ಮಾಡಲಾಗುತ್ತದೆ ಎಂಬ ನಕಲಿ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಹರಿಬಿಡಲಾಗಿತ್ತು. ಅಂತೆಯೇ ಇದೀಗ ಇಂಡಿಯಾ ಪೋಸ್ಟ್‌ಗೆ ಸಂಬಂಧಿಸಿದ ಸಂದೇಶವೊಂದು ಹರಿದಾಡುತ್ತಿದೆ. ‘ಆತ್ಮೀಯ ಗ್ರಾಹಕರೆ, ನಿಮ್ಮ ಇಂಡಿಯಾ ಪೋಸ್ಟ್ ಪೇಮೆಂಟ್‌ ಬ್ಯಾಂಕ್ ಖಾತೆಯನ್ನು ಇಂದು ನಿರ್ಬಂಧಿಸಲಾಗಿದೆ. ದಯವಿಟ್ಟು ನಿಮ್ಮ ಪಾನ್‌ ಕಾರ್ಡ್ ಅನ್ನು ತಕ್ಷಣ ನವೀಕರಿಸಿ. ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ- http://surl.li./iccpf’ ಎಂದು ಸಂದೇಶದಲ್ಲಿ ತಿಳಿಸಲಾಗಿದೆ. ಆದರೆ ಇದು ನಿಜವಲ್ಲ.

ಪ್ರೆಸ್‌ ಇನ್‌ಫರ್ಮೇಷನ್‌ ಬ್ಯೂರೊ (ಪಿಐಬಿ) ಫ್ಯಾಕ್ಟ್‌ಚೆಕ್‌ ವಿಭಾಗವು ಈ ಸಂದೇಶದ ಹಿಂದಿನ ಅಸಲಿಯತ್ತನ್ನು ಪತ್ತೆಹಚ್ಚಿದ್ದು, ‘ಇಂಡಿಯಾ ಪೋಸ್ಟ್ ಹೆಸರಿನಲ್ಲಿ ಹರಿದಾಡುತ್ತಿರುವ ಸಂದೇಶ ನಕಲಿ. ಇಂಡಿಯಾ ಪೋಸ್ಟ್ ಈ ರೀತಿಯ ಸಂದೇಶಗಳನ್ನು ತನ್ನ ಗ್ರಾಹಕರಿಗೆ ಕಳುಹಿಸುವುದಿಲ್ಲ. ಈ ಲಿಂಕ್ ಅನ್ನು ಜನರು ಕ್ಲಿಕ್ ಮಾಡಿದರೆ, ವಂಚನೆಗೆ ಒಳಗಾಗಬಹುದು’ ಎಂದು ಎಚ್ಚರಿಕೆ ನೀಡಿದೆ. ಸಾರ್ವಜನಿಕರು ತಮ್ಮ ವೈಯಕ್ತಿಕ ಹಾಗೂ ಬ್ಯಾಂಕ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಎಂದೂ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT