ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆ ವೇಳೆ ವೈದ್ಯರೇ ಕಣ್ಣುಮುಚ್ಚಿಕೊಳ್ಳಬೇಕು ಎಂದು ಮುಸ್ಲಿಂ ಮಹಿಳೆ ಹೇಳಿಲ್ಲ

Published 20 ಡಿಸೆಂಬರ್ 2023, 23:30 IST
Last Updated 20 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

‘ಟಿವಿ ವಿಕ್ರಮ’ ಎನ್ನುವ ಯೂಟ್ಯೂಬ್‌ ವಾಹಿನಿಯಲ್ಲಿ ಪ್ರಸಾರವಾದ ಸಂದರ್ಶನದ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಿಜಾಬ್‌ ಧರಿಸಿದ ಮಹಿಳೆಯೊಬ್ಬರನ್ನು ಸಂದರ್ಶಿಸುತ್ತಿರುವ ವಿಡಿಯೊ ಇದಾಗಿದೆ. ಹಿಜಾಬ್‌ ಧರಿಸಿರುವ ಸಂದರ್ಭದಲ್ಲಿ ಪುರುಷ ದಂತ ವೈದ್ಯರ ಬಳಿ ತೆರಳಬೇಕಾದ ಸಂದರ್ಭದಲ್ಲಿ ಏನು ಮಾಡುತ್ತೀರಾ ಎಂದು ಸಂದರ್ಶಕ ಪ್ರಶ್ನೆ ಕೇಳಿದ್ದಾರೆ. ‘ಅಂಥ ಸಂದರ್ಭದಲ್ಲಿ ಹಿಜಾಬ್‌ ತೆರೆಯುತ್ತೇನೆ. ಆದರೆ, ವೈದ್ಯರು ತಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಬೇಕು’ ಎಂದು ಮಹಿಳೆ ಉತ್ತರಿಸಿದ್ದಾರೆ. ಇಲ್ಲಿಗೆ ವಿಡಿಯೊ ತುಣುಕು ಕೊನೆಗೊಳ್ಳುತ್ತದೆ. ಈ ವಿಡಿಯೊವನ್ನು ‘ವೈದ್ಯರ ಬಳಿಯೂ ಇವರು ಹಿಜಾಬ್‌ ತೆರೆಯುವುದಿಲ್ಲಂತೆ’ ಎಂದು ಅಪಹಾಸ್ಯ ಮಾಡುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದ್ದು, ಈ ವಿಡಿಯೊ ತುಣುಕನ್ನು ಲಕ್ಷಗಟ್ಟಲೆ ಜನ ವೀಕ್ಷಿಸಿದ್ದಾರೆ. ಆದರೆ, ಇದು ನಿಜವಾದ ಸಂದರ್ಶನವಲ್ಲ.

ಮಹಿಳೆಯೊಂದಿಗೆ ನಡೆಸಿದ ಪೂರ್ಣ ಸಂದರ್ಶನವನ್ನು 2022 ಫೆಬ್ರುವರಿ 18ರಂದು ‘ಟಿವಿ ವಿಕ್ರಮ’ ತನ್ನ ಯೂಟ್ಯೂಬ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದೆ. ಇದೇ ಸಂದರ್ಶನದ 1.45 ನಿಮಿಷದ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು. ವಿಡಿಯೊ ಆರಂಭವಾಗುವುದಕ್ಕೂ ಮೊದಲು ಅದು ಸೂಚನೆಯೊಂದನ್ನು ಪ್ರಕಟಿಸಿದೆ. ‘ಇದು ಶಿಕ್ಷಣ ಪಡೆಯೋ ಸಮಯದಲ್ಲಿ ಮಕ್ಕಳು ಧರ್ಮವೇ ದೊಡ್ಡದು ಅಂತ ತಮ್ಮ ಭವಿಷ್ಯ ನಾಶ ಮಾಡಿಕೊಳ್ತಿರೋ ಸಂದರ್ಭದಲ್ಲಿ ಕೆಲವರಿಗೆ ಒಂದಿಷ್ಟು ಸಂದೇಶ ಕೊಡುವ ಪ್ರಯತ್ನ ಈ ಕಾಲ್ಪನಿಕ ಸಂದರ್ಶನ’ ಎಂಬುದಾಗಿ ಸೂಚನೆಯಲ್ಲಿ ವಾಹಿನಿ ಹೇಳಿದೆ. ಆದ್ದರಿಂದ, ಈ ಸಂದರ್ಶನವು ನಿಜವಾದದ್ದಲ್ಲ ಮತ್ತು ಸಂಪೂರ್ಣವಾಗಿ ಕಾಲ್ಪನಿಕವಾದುದು ಎಂದು ಆಲ್ಟ್‌ನ್ಯೂಸ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT