ಒವೈಸಿ ಇರುವ ವಿಡಿಯೊ ಅನ್ನು ಇನ್‌ವಿಡ್ ಟೂಲ್ ಸರ್ಚ್‌ಗೆ ಒಳಪಡಿಸಿ, ಅದರ ಕೀಫ್ರೇಮ್ ಅನ್ನು ಗೂಗಲ್ ಲೆನ್ಸ್ ಮೂಲಕ ಪರಿಶೀಲಿಸಿದಾಗ, ಇದೇ ವಿಡಿಯೊ ಅನ್ನು ಹೈದರಾಬಾದ್ ನ್ಯೂಸ್ ಉರ್ದು ಯುಟ್ಯೂಬ್‌ನಲ್ಲಿ 2019ರಲ್ಲಿ ಅಪ್‌ಲೋಡ್ ಮಾಡಿದ್ದು ಕಂಡುಬಂತು. ಅದರಲ್ಲಿ ವಿಮಾನದಲ್ಲೇ ಒವೈಸಿ ಪ್ರಯಾಣ ಮಾಡಿರುವ ಬಗ್ಗೆ ವಿವರಿಸಲಾಗಿತ್ತು. ಎರಡನೆಯ ವಿಡಿಯೊ ಅನ್ನೂ ಅದೇ ರೀತಿ ಪರಿಶೀಲನೆಗೊಳಪಡಿಸಿದಾಗ, ವಿಡಿಯೊ ಅನ್ನು ‘ಡ್ರಂಕ್ ಜರ್ನಲಿಸ್ಟ್’ ಎನ್ನುವ ಎಕ್ಸ್ ಖಾತೆಯಲ್ಲಿ 2024ರಲ್ಲಿ ಹಂಚಿಕೊಂಡಿರುವುದು ಕಂಡುಬಂತು. ಇವೆರಡೂ ಬೇರೆ ಬೇರೆ ವಿಡಿಯೊಗಳಾಗಿದ್ದು, ಪರಸ್ಪರ ಸಂಬಂಧವೇ ಇಲ್ಲದ ಎರಡು ವಿಡಿಯೊಗಳನ್ನು ಸೇರಿಸಿ, ಸುಳ್ಳು ಪ್ರತಿಪಾದನೆಗಳನ್ನು ಮಾಡಲಾಗುತ್ತಿದೆ. ಈ ಬಗ್ಗೆ ಪಿಟಿಐ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.