ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ಫೋಟೊದಲ್ಲಿರುವ ವ್ಯಕ್ತಿ ಲೋಕಸಭೆಯೊಳಗೆ ನುಗ್ಗಿದ ಮನೋರಂಜನ್‌ ಅಲ್ಲ

Published 17 ಡಿಸೆಂಬರ್ 2023, 23:30 IST
Last Updated 17 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಭಾರತೀಯ ವಿದ್ಯಾರ್ಥಿ ಸಂಘಟನೆಯ (ಎಸ್‌ಎಫ್‌ಐ) ಮೈಸೂರು ವಿಭಾಗವು ಆಯೋಜಿಸಿದ್ದ ‘ಮೈಸೂರು ನಗರ ಸಮ್ಮೇಳನ’ ಕಾರ್ಯಕ್ರಮದ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದೆ. ಈ ಫೋಟೊದಲ್ಲಿ ವ್ಯಕ್ತಿಯೊಬ್ಬರ ಮುಖದ ಸುತ್ತಲು ಕೆಂಪು ಬಣ್ಣದ ರೇಖೆಯಿಂದ ವೃತ್ತಾಕಾರದಲ್ಲಿ ಗುರುತಿಸಲಾಗಿದೆ ಮತ್ತು ಈ ವ್ಯಕ್ತಿಯನ್ನು ಮನೋರಂಜನ್ ಎಂದು ಫೋಟೊ ಜೊತೆಗಿನ ಪೋಸ್ಟ್‌ಗಳಲ್ಲಿ ಹೇಳಲಾಗುತ್ತಿದೆ. ಮನೋರಂಜನ್‌ ಮತ್ತು ಇತರ ಕೆಲವರು ಸಂಸತ್ತಿನ ಒಳನುಗ್ಗಿ ಸ್ಮೋಕ್‌ ಟಿನ್‌ ಅನ್ನು ಲೋಕಸಭೆ ಒಳಗೆ ಇತ್ತೀಚೆಗಷ್ಟೆ ಬಿಸಾಡಿದ್ದರು. ಇವರು ಎಸ್‌ಎಫ್‌ಐ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಆರೋಪಿಸಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ, ಇದು ಸುಳ್ಳು ಸುದ್ದಿ.

ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಫೋಟೊದಲ್ಲಿ ಇರುವವರು ಎಸ್‌ಎಫ್‌ಐ, ಮೈಸೂರಿನ ಜಿಲ್ಲಾ ಅಧ್ಯಕ್ಷ ವಿಜಯ್‌ ಕುಮಾರ್‌. ಇವರನ್ನೇ ತಪ್ಪಾಗಿ ಮನೋರಂಜನ್‌ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮೈಸೂರಿನ ಎಸ್‌ಎಫ್‌ಐ ಹಾಗೂ ಸ್ವತಃ ವಿಜಯ್‌ ಕುಮಾರ್‌ ಅವರು ಸ್ಪಷ್ಟನೆ ನೀಡಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ಕುರಿತು ವಿಜಯ್‌ ಅವರು ಪೊಲೀಸರಿಗೂ ದೂರು ನೀಡಿದ್ದಾರೆ. ಆದ್ದರಿಂದ, ಹಂಚಿಕೆಯಾಗುತ್ತಿರುವ ಫೋಟೊದಲ್ಲಿ ಇರುವವರು ಮನೋರಂಜನ್‌ ಅಲ್ಲ ಎಂದು ‘ದಿ ಕ್ವಿಂಟ್‌’ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT