ನವದೆಹಲಿ:ಎಂಬಿಬಿಎಸ್ ವಿದ್ಯಾರ್ಥಿಗಳಿಗೆಹತ್ತು ದಿನಗಳ ಯೋಗ ತರಬೇತಿ ಕೋರ್ಸ್ ಆಯೋಜಿಸುವಂತೆ ರಾಜ್ಯ ಸರ್ಕಾರಗಳು, ವಿಶ್ವವಿದ್ಯಾಲಯಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಹೇಳಿದೆ.2026ರ ವೇಳೆಗೆ ರಾಷ್ಟ್ರವ್ಯಾಪಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮೊದಲ ಬಾರಿಗೆ ಯೋಗ ವಿಷಯದ ತೇರ್ಗಡೆ ಪರೀಕ್ಷೆ ನಡೆಸುವಂತೆಯೂ ಗುರಿ ನಿಗದಿಪಡಿಸಿದೆ.

ಹೊಸ ಪಠ್ಯಕ್ರಮದಲ್ಲಿಈ ಕೋರ್ಸ್‌ನ ಸೇರ್ಪಡೆಯ ಭಾಗವಾಗಿ ಒಂದು ಗಂಟೆ ಅವಧಿಯ ಯೋಗ ತರಬೇತಿಜೂನ್ 12 ರಿಂದ ಆರಂಭವಾಗಲಿದ್ದು, ಜೂನ್ 21ರ ಅಂತರರಾಷ್ಟ್ರೀಯ ಯೋಗದಿನದಂದು ಮುಕ್ತಾಯವಾಗಲಿದೆಎಂದು ಎನ್‌ಎಂಸಿ ಪ್ರಕಟಣೆ ಹೊರಡಿಸಿದೆ.

ದೇಶದಾದ್ಯಂತ ಎಲ್ಲವೈದ್ಯಕೀಯ ಕಾಲೇಜುಗಳು ಯೋಗ ದಿನ ಆಚರಿಸುವಂತೆ ಮತ್ತು ಎಲ್ಲ ಬ್ಯಾಚ್‌ನ ಎಂಬಿಬಿಎಸ್ ವಿದ್ಯಾರ್ಥಿಗಳೂ ಯೋಗ ಅಭ್ಯಾಸ ಮಾಡುವಂತೆ ತಿಳಿಸಲಾಗಿದೆ.

ಎನ್‌ಎಂಸಿಯ ಪದವಿ ಪೂರ್ವ ಮಂಡಳಿಯು ಸಾಮಾನ್ಯ ಮಾನದಂಡ ನೀಡಬಹುದು. ಆದರೆ, ಕಾಲೇಜುಗಳು ತಮ್ಮದೇ ಮಾನದಂಡಗಳನ್ನು ರೂಪಿಸಲು ಮುಕ್ತ ಅವಕಾಶ ಇರಲಿದೆ. ಹಾಗೆಯೇ, ಯೋಗ ಘಟಕಗಳನ್ನು ತೆರೆಯಲೂ ಸಲಹೆನೀಡಲಾಗಿದೆ.

2022ರ ಫೆಬ್ರವರಿ-ಮಾರ್ಚ್‌ನಲ್ಲಿ ಸೇರಿರುವ 2021-22ರ ಬ್ಯಾಚ್ ವಿದ್ಯಾರ್ಥಿಗಳಿಗಾಗಿ 2026ರ ಏಪ್ರಿಲ್‌ನಲ್ಲಿ ಮೊದಲ ಸುತ್ತಿನ ತೇರ್ಗಡೆ ಪರೀಕ್ಷೆ ನಡೆಸಲು ಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.