ಪಾಲ್ಘರ್: ‘ಕಾತಕರಿ’ ಎಂಬ ಬುಡಕಟ್ಟು ಜನಾಂಗಕ್ಕೆ ಸೇರಿದ 10 ವರ್ಷದ ಬಾಲಕಿಯನ್ನು ಜೀತಪದ್ಧತಿಗೆ ಒತ್ತಾಯಿಸಿದ ಆರೋಪದಡಿ ಮಹಿಳೆಯೊಬ್ಬರ ವಿರುದ್ಧ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಾಡಾ ತಾಲ್ಲೂಕಿನ ನಿವಾಸಿಯಾದ ಬಾಲಕಿಯ ತಂದೆ ನಿಧನರಾದ ಬಳಿಕ, ತಾಯಿಯೂ ಆಕೆಯನ್ನು ಬಿಟ್ಟು ಹೋಗಿದ್ದರಿಂದ ಅಜ್ಜಿಯ ಆರೈಕೆಯಲ್ಲಿ ಇದ್ದಳು.

‘ಕಳೆದ ವರ್ಷ ಗಣೇಶ ಹಬ್ಬದ ಸಂದರ್ಭದಲ್ಲಿ ಭಯಂದರ್ನ ಮಹಿಳೆಯೊಬ್ಬಳು ನನ್ನ ಮೊಮ್ಮಗಳನ್ನು ಕರೆದುಕೊಂಡು ಹೋಗಿದ್ದಳು. ಆಕೆ ಮೊಮ್ಮಗಳಿಗೆ ಬಟ್ಟೆ, ಪಾತ್ರೆ ತೊಳೆಯಲು, ನೆಲವನ್ನು ಒರೆಸಲು ಮತ್ತು ಮೀನುಗಳನ್ನು ಸಂಗ್ರಹಿಸಲು ಒತ್ತಾಯಿಸುತ್ತಿದ್ದಳು. ಅಲ್ಲದೆ, ನಿಂದಿಸಿ ಹೊಡೆಯುತ್ತಿದ್ದಳು’ ಎಂದು ಬಾಲಕಿಯ ಅಜ್ಜಿ ಪೊಲೀಸರಿಗೆ ಬುಧವಾರ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

‘ಈ ವರ್ಷದ ಜೂನ್ನಲ್ಲಿ ಬಾಲಕಿ ಮನೆಗೆ ವಾಪಸ್ ಬಂದ ನಂತರವೂ ದೌರ್ಜನ್ಯ ಮುಂದುವರಿದಿತ್ತು. ಆಕೆಯನ್ನು ಮತ್ತೆ ಕೆಲಸಕ್ಕೆ ಕರೆದೊಯ್ಯಲು ಆ ಮಹಿಳೆಯು ₹5 ಸಾವಿರದಿಂದ ₹6 ಸಾವಿರದವರೆಗೆ ಮುಂಗಡ ಹಣ ಕಳುಹಿಸಿದ್ದಾಳೆ’ ಎಂದು ಆರೋಪಿಸಿದ್ದಾರೆ.

‘ಬುಧವಾರ ಮಹಿಳೆಯು ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದಾಳೆ. ಆಕೆಯ ಅಜ್ಜಿ ಆಕ್ಷೇಪ ವ್ಯಕ್ತಪಡಿಸಿದಾಗ, ತಾನು ಈಗಾಗಲೇ ಪಾವತಿಸಿದ್ದ ಹಣದ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾಳೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.