ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಭಯ ಪ್ರಕರಣಕ್ಕೆ 10 ವರ್ಷ | ಮಹಿಳೆಯರಿಗಿಲ್ಲ ರಕ್ಷಣೆ: ಪೋಷಕರು ಅಳಲು

Last Updated 15 ಡಿಸೆಂಬರ್ 2022, 16:09 IST
ಅಕ್ಷರ ಗಾತ್ರ

ನವದೆಹಲಿ: ನಿರ್ಭಯ ಅತ್ಯಾಚಾರ ಪ್ರಕರಣ ನಡೆದು ಗುರುವಾರಕ್ಕೆ 10 ವರ್ಷ ಪೂರ್ಣಗೊಂಡಿದ್ದು, ದೆಹಲಿಯಲ್ಲಿ ಈಗಲೂ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂದು ನಿರ್ಭಯ ಪೋಷಕರು ಹೇಳಿದ್ದಾರೆ.

‘10 ವರ್ಷಗಳಲ್ಲಿ ನಿರ್ಭಯ ಬಿಟ್ಟರೆ ಬೇರೆ ಯಾರಿಗೂ ನ್ಯಾಯ ಸಿಕ್ಕಿಲ್ಲ. ಈ ಅವಧಿಯಲ್ಲಿ ಏನೂ ಬದಲಾವಣೆ ಆಗಿಲ್ಲ’ ಎಂದು ನಿರ್ಭಯ ತಾಯಿ ಆಶಾ ದೇವಿ ಬೇಸರ ವ್ಯಕ್ತಪಡಿಸಿದ್ದಾರೆ.

‘ನಿರ್ಭಯ ಪ್ರಕರಣದ ನಂತರ ಲೈಂಗಿಕ ದೌರ್ಜನ್ಯಕ್ಕೆ ತುತ್ತಾದವರ ಪೈಕಿ ಹಲವರು ತಮಗಾಗಿರುವ ಅನ್ಯಾಯದ ಕುರಿತು ಗಟ್ಟಿಯಾಗಿ ಧ್ವನಿ ಎತ್ತುತ್ತಿದ್ದಾರೆ. ಅದೊಂದೇ ಸಮಾಧಾನದ ಸಂಗತಿ’ ಎಂದಿದ್ದಾರೆ.

‘ಈಗಲೂ ಮಹಿಳೆಯರಿಗೆ ಸುರಕ್ಷತೆ ಇಲ್ಲ. ದುರುಳರು ನಿರಂತರವಾಗಿ ಅಪರಾಧ ಕೃತ್ಯಗಳನ್ನು ನಡೆಸುತ್ತಿದ್ದಾರೆ’ ಎಂದು ನಿರ್ಭಯ ತಂದೆ ಬದ್ರಿ ನಾರಾಯಣ ಸಿಂಗ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಹೋದ ವರ್ಷ ಮಹಿಳೆಯರ ಮೇಲಿನ ಅಪರಾಧಕ್ಕೆ ಸಂಬಂಧಿಸಿದ 13,892 ಪ್ರಕರಣಗಳು ದಾಖಲಾಗಿದ್ದವು. 2020ಕ್ಕೆ ಹೋಲಿಸಿದರೆ ಇದು ಶೇ 40 ರಷ್ಟು ಅಧಿಕ ಎಂಬುದು ಎನ್‌ಸಿಆರ್‌ಬಿ ದತ್ತಾಂಶದಿಂದ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT