ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

1,037 ಪೊಲೀಸರಿಗೆ ಶೌರ್ಯ, ಸೇವಾ ಪದಕ ಪ್ರಕಟ

Published 14 ಆಗಸ್ಟ್ 2024, 15:10 IST
Last Updated 14 ಆಗಸ್ಟ್ 2024, 15:10 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಹಾಗೂ ರಾಜ್ಯ ಪೊಲೀಸ್‌ ಪಡೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 1,037 ಪೊಲೀಸರಿಗೆ ಶೌರ್ಯ ಹಾಗೂ ಸೇವಾ ಪದಕಗಳನ್ನು ಸ್ವಾತಂತ್ರೋತ್ಸವದ ಮುನ್ನಾ ದಿನವಾದ ಬುಧವಾರದಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಗೃಹ ಸಚಿವಾಲಯವು, ‘ರಾಷ್ಟ್ರಪತಿ ಶೌರ್ಯ ಪದಕ (ಪಿಎಂಜಿ) ಒಳಗೊಂಡಂತೆ 214 ಮಂದಿಗೆ ಶೌರ್ಯ ಪದಕ ದೊರೆತಿದೆ. ಇದರಲ್ಲಿ ಐವರು ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಒಬ್ಬ ನಾಗರಿಕ ರಕ್ಷಣಾ ಸಿಬ್ಬಂದಿ ಸೇರಿದ್ದಾರೆ’ ಎಂದು ಮಾಹಿತಿ ನೀಡಿದೆ.

‘94 ಮಂದಿಗೆ ಈ ಬಾರಿ ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕವನ್ನು ನೀಡಲಾಗಿದೆ. ಜೊತೆಗೆ, ಶ್ಲಾಘನೀಯ ಸೇವಾ ಪದಕವನ್ನು 729 ಪೊಲೀಸರಿಗೆ ನೀಡಲಾಗಿದೆ’ ಎಂದು ತಿಳಿಸಿದೆ.

ಜನರ ಜೀವ ಹಾಗೂ ಆಸ್ತಿ–ಪಾಸ್ತಿಯ ರಕ್ಷಣೆ, ಅಪರಾಧ ಪತ್ತೆ ಹಾಗೂ ತಡೆಗಾಗಿ, ಜೊತೆಗೆ, ಅಪರಾಧಿಗಳನ್ನು ಬಂಧಿಸಿದ ಶೌರ್ಯ‌ಕ್ಕಾಗಿ ಶ್ಲಾಘನೀಯ ಸೇವಾ ಪದಕ ಮತ್ತು ರಾಷ್ಟ್ರಪತಿ ಶೌರ್ಯ ಪದಕವನ್ನು ನೀಡಲಾಗುತ್ತದೆ. ಪೊಲೀಸ್‌ ಸೇವೆಯಲ್ಲಿ ಅತ್ಯುತ್ತಮ ಕಾರ್ಯಗಳನ್ನು ಸಾಧಿಸಿರುವುದಕ್ಕೆ ರಾಷ್ಟ್ರಪತಿ ಸೇವಾ ಪದಕವನ್ನು ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT