ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾದ 1,440 ವಿವಿ ಪ್ಯಾಟ್ಗಳು ಹಾಗೂ ವಿದ್ಯುನ್ಮಾನ ಮತಯಂತ್ರಗಳಲ್ಲಿ (EVM) ದಾಖಲಾದ ಮತಗಳನ್ನು ಪರಿಶೀಲಿಸಲಾಗಿದ್ದು, ಫಲಿತಾಂಶ ಹೋಲಿಕೆಯಾಗಿವೆ ಎಂದು ರಾಜ್ಯದ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಕಿರಣ್ ಕುಲಕರ್ಣಿ ತಿಳಿಸಿದ್ದಾರೆ.

ಇವಿಎಂ ವಿಶ್ವಾಸಾರ್ಹತೆ ಕುರಿತು ಎದ್ದಿರುವ ವಿವಾದಕ್ಕೆ ತೆರೆ ಎಳೆದಿರುವ ಅವರು, ವಿವಿಪ್ಯಾಟ್ನಲ್ಲಿ ಸಂಗ್ರಹವಾಗಿರುವ ಪ್ರಿಂಟ್ಔಟ್ಗಳು ಹಾಗೂ ಮತಯಂತ್ರದಲ್ಲಿ ದಾಖಲಾದ ಮತಗಳು ಹೋಲಿಕೆಯಾಗಿವೆ. ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಆದಾಗ್ಯೂ, ವಿವಿಪ್ಯಾಟ್ಗಳನ್ನು ಸ್ವತಂತ್ರ ಪರಿಶೀಲನಾ ವ್ಯವಸ್ಥೆಯಾಗಿ ಮತಯಂತ್ರಕ್ಕೆ ಜೋಡಿಸಲಾಗಿದೆ ಎಂದರು.

ವಿದ್ಯುನ್ಮಾನ ಮತಯಂತ್ರವನ್ನು ಯಾವುದೇ ಕಾರಣಕ್ಕೂ ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಪ್ರಸಕ್ತ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ 659 ಪ್ರಕರಣಗಳು ದಾಖಲಾಗಿವೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ 366 ಇಂಥ ಪ್ರಕರಣಗಳು ದಾಖಲಾಗಿದ್ದವು. ತನಿಖೆ ನಡೆಸಲಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಮತಯಂತ್ರಗಳ ಚಾರ್ಜಿಂಗ್ ಸದಾ ಶೇ 99ರಷ್ಟು ತೋರಿಸುತ್ತಿರುವ ಕುರಿತು ಎದ್ದಿರುವ ವಿವಾದಕ್ಕೆ ಪ್ರತಿಕ್ರಿಯಿಸಿದ ಕುಲಕರ್ಣಿ, ‘ಇದು ಮೊಬೈಲ್ನಂತ ಸಾಧನವಲ್ಲ. ಇವಿಎಂಗಳನ್ನು ಒಮ್ಮೆ ಚಾರ್ಜ್ ಮಾಡಿದರೆ ಐದು ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿವೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.