ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಸ್ಸಾಂ: ಸರ್ಕಾರಿ ಜಾಗದಲ್ಲಿದ್ದ 1,500 ಕುಟುಂಬಗಳ ತೆರವು

Published 24 ಜೂನ್ 2024, 13:44 IST
Last Updated 24 ಜೂನ್ 2024, 13:44 IST
ಅಕ್ಷರ ಗಾತ್ರ

ಮೊರಿಗಾಂವ್: ಅಸ್ಸಾಂನ ಮೋರಿಗಾಂವ್ ಜಿಲ್ಲೆಯಲ್ಲಿ ಅರಣ್ಯ ಹಾಗೂ ರೈಲ್ವೆ ಇಲಾಖೆಗೆ ಸೇರಿದ ಜಾಗಗಳಲ್ಲಿ ಅಕ್ರಮವಾಗಿ ನೆಲೆಸಿದ್ದ ಸುಮಾರು 1,500 ಕುಟುಂಬಗಳನ್ನು ರಾಜ್ಯ ಸರ್ಕಾರ ಸೋಮವಾರ ತೆರವುಗೊಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದೇವಾಶಿಶ್ ಶರ್ಮಾ, ‘ಜಾಗಿರೋಡ್‌ನ ಸಿಲಭಂಗಾ ಗ್ರಾಮದಲ್ಲಿರುವ ಸರ್ಕಾರಿ ಜಾಗದಲ್ಲಿ ಸುಮಾರು 10 ಸಾವಿರ ಮಂದಿ ವಾಸವಿದ್ದರು. 10 ದಿನಗಳಲ್ಲಿ ಜಾಗ ತೆರವುಗೊಳಿಸುವಂತೆ ಅವರಿಗೆ ಜೂನ್ 12ರಂದು ನೋಟಿಸ್ ನೀಡಲಾಗಿತ್ತು. ಈ ಪ್ರಕಾರ ಬಹುತೇಕ ಮಂದಿ ಬೇರೆಡೆ ಹೋಗಿದ್ದಾರೆ. ಮಕ್ಕಳ ವಿವಿಧ ಪರೀಕ್ಷೆ ಇರುವ ಕಾರಣ ಜಾಗ ಖಾಲಿ ಮಾಡಲು ಹೆಚ್ಚುವರಿ ಸಮಯ ಬೇಕೆಂದು ಕೆಲವರು ಕೋರಿದ್ದರು. ಮಾನವೀಯತೆ ನೆಲೆಯಲ್ಲಿ ಅಂಥವರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು’ ಎಂದರು. 

‘ಯಾವುದೇ ಮನೆಯನ್ನು ಕೆಡವಿಹಾಕದೆ ಅಥವಾ ಬಲ ಪ್ರಯೋಗಿಸದೆ ಜಾಗ ಖಾಲಿ ಮಾಡಿಸುವುದು ಸರ್ಕಾರದ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ಜನರ ಜೊತೆಗೆ ಚರ್ಚಿಸಿದ್ದೆವು. ಶೇ 80ರಷ್ಟು ಜನರು ಜಾಗ ಖಾಲಿ ಮಾಡಿದ್ದಾರೆ’ ಎಂದು ಅವರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT