ನವದೆಹಲಿ: 2021ನೇ ಸಾಲಿನಲ್ಲಿ ಕರ್ನಾಟಕದ ಆರು ಪೊಲೀಸ್ ಅಧಿಕಾರಿಗಳು ಸೇರಿದಂತೆ 152 ಪೊಲೀಸ್ ಅಧಿಕಾರಿಗಳಿಗೆ ತನಿಖಾ ಶ್ರೇಷ್ಠತೆಗಾಗಿ ಇರುವ ಕೇಂದ್ರ ಗೃಹ ಸಚಿವರ ಪದಕವನ್ನು ನೀಡಿ ಗೌರವಿಸಲಾಗಿದೆ.

‘ಅಪರಾಧ ತನಿಖೆಯ ಉನ್ನತ ವೃತ್ತಿಪರ ಗುಣಮಟ್ಟಕ್ಕಾಗಿದೇಶದಾದ್ಯಂತ 28 ಮಹಿಳಾ ಅಧಿಕಾರಿಗಳು ಸೇರಿದಂತೆ ಒಟ್ಟು 152 ಪೊಲೀಸ್ ಅಧಿಕಾರಿಗಳಿಗೆ ಈ ಪದಕವನ್ನು ನೀಡಲಾಗಿದೆ’ ಎಂದು ಕೇಂದ್ರ ಗೃಹ ಸಚಿವಾಲಯವು ಗುರುವಾರ ತಿಳಿಸಿದೆ.

ಅಪರಾಧದ ತನಿಖೆಯ ವೃತ್ತಿಪರ ಗುಣಮಟ್ಟವನ್ನು ಉತ್ತೇಜಿಸಲು ಮತ್ತು ಆ ಶ್ರೇಷ್ಠ ವೃತ್ತಿಪರತೆಯನ್ನು ಹೊಂದಿರುವ ಅಧಿಕಾರಿಗಳನ್ನು ಗುರುತಿಸುವ ನಿಟ್ಟಿನಲ್ಲಿ 2018ರಿಂದ ಈ ಪದಕವನ್ನು ಪ್ರಧಾನ ಮಾಡಲಾಗುತ್ತಿದೆ.

ಸಿಬಿಐನ 15 ಮಂದಿ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಇಲಾಖೆಯ ತಲಾ 11 ಪೊಲೀಸ್ ಅಧಿಕಾರಿಗಳು, ಉತ್ತರ ಪ್ರದೇಶದಲ್ಲಿ 10, ಕೇರಳ ಮತ್ತು ರಾಜಸ್ಥಾನ ಪೊಲೀಸ್ ಇಲಾಖೆಯ ತಲಾ 9 ಅಧಿಕಾರಿಗಳು, ತಮಿಳುನಾಡಿನ 8 ಮತ್ತು ಬಿಹಾರದ 7 ಅಧಿಕಾರಿಗಳು ಹಾಗೂ ಗುಜರಾತ್, ಕರ್ನಾಟಕ ಮತ್ತು ದೆಹಲಿ ಪೊಲೀಸ್ ವಿಭಾಗದಲ್ಲಿ ತಲಾ ಆರು ಪೊಲೀಸ್ ಅಧಿಕಾರಿಗಳು ಸೇರಿದಂತೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಚಾರ್ಲ್ಸ್–ಡಯಾನಾ ವಿವಾಹದ ಕೇಕ್ ಸ್ಲೈಸ್ ₹1.90 ಲಕ್ಷಕ್ಕೆ ಮಾರಾಟ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.