ನವದೆಹಲಿ: ಭಾರತ ಸರ್ಕಾರವು ಪ್ಯಾರಿಸ್‌ನಲ್ಲಿ ಹೊಂದಿರುವ 20 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಬ್ರಿಟನ್‌ನ ಕೈರ್ನ್ ಎನರ್ಜಿ ಸಂಸ್ಥೆಗೆ ಫ್ರಾನ್ಸ್‌ನ ನ್ಯಾಯಾಲಯವು ಅನುಮತಿ ಕೊಟ್ಟಿದೆ. ಕೈರ್ನ್ ಎನರ್ಜಿ ಸಂಸ್ಥೆಗೆ ಭಾರತವು ಸುಮಾರು ₹ 12,850 ಕೋಟಿಯಷ್ಟು ತೆರಿಗೆಯನ್ನು ಪೂರ್ವಾನ್ವಯವಾಗಿ ಹೇರಿತ್ತು. ಇದನ್ನು ಸಂಸ್ಥೆಯು ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿತ್ತು. ಈ ನ್ಯಾಯಮಂಡಳಿಯು ಸಂಸ್ಥೆಯ ಪರವಾಗಿ ತೀರ್ಪು ನೀಡಿತ್ತು.

ಪ್ಯಾರಿಸ್‌ನಲ್ಲಿ ಭಾರತವು ಹೊಂದಿರುವ ಕಟ್ಟಡಗಳನ್ನು ವಶಕ್ಕೆ ಪಡೆಯಲು ಜೂನ್ 11ರಂದೇ ಫ್ರಾನ್ಸ್‌ನ ನ್ಯಾಯಾಲಯವು ಅನುಮತಿ ನೀಡಿತ್ತು. ಇತರ ಕಾನೂನು ಪ್ರಕ್ರಿಯೆಗಳು ಬುಧವಾರ ಸಂಜೆ ಪೂರ್ಣಗೊಂಡಿವೆ ಎಂದು ಮೂಲಗಳು ತಿಳಿಸಿವೆ.

ಭಾರತ ಸರ್ಕಾರವು ಪ್ಯಾರಿಸ್‌ನಲ್ಲಿ ಹೊಂದಿದ್ದ ಕಟ್ಟಡಗಳ ಮೌಲ್ಯವು ಸುಮಾರು ₹ 175 ಕೋಟಿ ಎಂದು ಅಂದಾಜಿಸಲಾಗಿದೆ. ಭಾರತದ ರಾಯಭಾರ ಕಚೇರಿಯ ಸಿಬ್ಬಂದಿಯ ವಾಸ್ತವ್ಯಕ್ಕೆ ಈ ಕಟ್ಟಡಗಳನ್ನು ಬಳಸಲಾಗುತ್ತಿತ್ತು. ಕೈರ್ನ್ ಸಂಸ್ಥೆಯು ಭಾರತದ ಸಿಬ್ಭಂದಿಯನ್ನು ಕಟ್ಟಡಗಳಿಂದ ಹೊರಗೆ ಹಾಕುವ ಸಾಧ್ಯತೆ ಇಲ್ಲ. ಆದರೆ, ಈ ಕಟ್ಟಡಗಳನ್ನು ಭಾರತವು ಮಾರಾಟ ಮಾಡಲು ಅವಕಾಶ ಇಲ್ಲ.

ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ಯಾವುದೇ ಆದೇಶ ಬಂದಿಲ್ಲ. ಆದೇಶ ಬಂದ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಣಕಾಸು ಸಚಿವಾಲಯವು ಹೇಳಿದೆ.

ಕೈರ್ನ್ ಪರವಾಗಿ ತೀರ್ಪು ನೀಡಿದ್ದಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿಯಲ್ಲಿ ಭಾರತದ ಒಬ್ಬ ನ್ಯಾಯಾಧೀಶರು ಇದ್ದರು. ಭಾರತ ಸರ್ಕಾರವು ಮುಟ್ಟುಗೋಲು ಹಾಕಿಕೊಂಡಿದ್ದ ಸಂಸ್ಥೆಯ ಷೇರುಗಳು ಮತ್ತು ಇತರ ಆಸ್ತಿಯನ್ನು ಹಿಂದಿರುಗಿಸಲು ನ್ಯಾಯಮಂಡಳಿಯು ಸೂಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.